ಕುಂಭಮೇಳ ಕಾಲ್ತುಳಿತ; ಹೆಚ್ಚಿನ ಹಾನಿಯಾಗಿಲ್ಲ, ಸಂಯಮದಿಂದ ಪುಣ್ಯ ಸ್ನಾನದಲ್ಲಿ ಭಾಗಿಯಾಗೋಣ – ಪೇಜಾವರ ಶ್ರೀ

ಉಡುಪಿ : ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ‌ ಎಂಬ ಸುದ್ದಿ ಬಂದಿದ್ದು, ಈ ಘಟನೆಯಲ್ಲಿ ಹೆಚ್ಚಿನ ಹಾನಿಯಾಗಿಲ್ಲ ಎಂದು ತಿಳಿದು ಸಮಾಧಾನವಾಯಿತು. ಮುಂದೆ ನಡೆಯುವ ಉತ್ಸವಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಿರಲಿ. ಹಾಗೆ, ಎಲ್ಲರೂ ಜಾಗರೂಕತೆಯಿಂದ ಕುಂಭಮೇಳದಲ್ಲಿ ಭಾಗಿಯಾಗೋಣ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಮಹಾಕುಂಭಮೇಳದಲ್ಲಿ ಶಾಹಿ ಸ್ನಾನ ಬಹಳ ಸಂಭ್ರಮದಿಂದ ನೆರವೇರಿದೆ. ಭಗವಂತನ ಅನುಗ್ರಹ ಎಲ್ಲರ ಮೇಲೆ ನಿರಂತರ ಇರಲಿ. ಎಲ್ಲರೂ ಸಂಯಮದಿಂದ ಪವಿತ್ರ ಸ್ನಾನದಲ್ಲಿ ಭಾಗವಹಿಸೋಣ ಎಂದು ಕರೆ ನೀಡಿದರು.

Related posts

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು