ಪ್ರಯಾಣ ಚೀಟಿ ತಪಾಸಣಾಧಿಕಾರಿಯ ಮಾನವೀಯಪ್ರಜ್ಞೆಗೆ ಪ್ರಶಂಸೆ

ಉಡುಪಿ : ಎಕ್ಸ್‌‌ಪ್ರೆಸ್ ರೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಪ್ರಯಾಣ ಚೀಟಿ ತಪಾಸಣಾಧಿಕಾರಿ ವಾಸುದೇವ ಪೈ ಅವರು, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಅಸಹಾಯಕ ಸ್ಥಿತಿಯಲ್ಲಿರುವುದನ್ನು ಗಮನಿಸಿ, ನೆರವಿಗೆ ಬಂದು ಮಾನವೀಯತೆ ಮೆರೆದಿರುವ ವಿದ್ಯಮಾನ ನಡೆದಿದೆ. ತಪಾಸಣಾಧಿಕಾರಿಯ ಮಾನವೀಯ ಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಪ್ರಯಾಣಚೀಟಿ ತಪಾಸಣಾಧಿಕಾರಿ ಅವರು ರಕ್ಷಿಸಿರುವ ವ್ಯಕ್ತಿಯನ್ನು ರೈಲು ಇಂದ್ರಾಳಿ ನಿಲ್ದಾಣದಲ್ಲಿ ಇಳಿಸಿ, ರೈಲ್ವೆ ಸಂರಕ್ಷಣಾ ದಳದ ಇನ್ಸ್‌ಪೆಕ್ಟರ್ ಮುಂದೆ ಹಾಜರುಪಡಿಸಿ, ಜೀನಾ ಪಿಂಟೋ ಕಾನೂನು ಪ್ರಕ್ರಿಯೆಗಳನ್ನು ನಡೆದಾದ ಬಳಿಕ, ಮಣಿಪಾಲ ಪೋಲಿಸರಿಗೆ ಒಪ್ಪಿಸಿದರು.

ಬಳಿಕ ಪೋಲಿಸರ ವಿನಂತಿಗೆ ಸ್ಪಂದಿಸಿದ ಸಮಾಜಸೇವಕ ನಿತ್ಯಾನಂದ ಒಳಕಾಡುರವರು, ರಕ್ಷಿಸಲ್ಪಟ್ಟಿರುವ ವ್ಯಕ್ತಿಯನ್ನು ದೊಡ್ಡಣಗುಡ್ಡೆಯ ಡಾ. ಎ.ವಿ. ಬಾಳಿಗ ಆಸ್ಪತ್ರೆಗೆ ದಾಖಲುಪಡಿಸಿದ್ದಾರೆ.

ರಕ್ಷಿಸಲ್ಪಟ್ಟಿರುವ ವ್ಯಕ್ತಿಯು ವಿಚಾರಣೆಲ್ಲಿ ದೈವತ್ ವಾಘ್ಮೊರೆ (46ವ) ತಂದೆ ವಿಲಾಸ್ ವಾಘ್ಮೋರೆ ಪೊಂಡಾ, ಗೋವಾದ ನಿವಾಸಿ ಎಂದು ಹೇಳಿಕೊಂಡಿದ್ದರು. ಸಂಬಂಧಿಕರನ್ನು ಪತ್ತೆಗೊಳಿಸಿದ ಇಲಾಖೆಯವರು ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಸಂಬಂಧಿಕರಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ