ಪಡೀಲ್ ಅಂಡರ್ ಪಾಸ್ ನೀರಿನಲ್ಲಿ ಸಿಕ್ಕಿಹಾಕಿಕೊಂಡ ಕೆಎಸ್ಆರ್‌ಟಿಸಿ ಬಸ್

ಮಂಗಳೂರು : ಮಂಗಳೂರಿನಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಭಾರೀ ಅವಾಂತರವನ್ನೇ ಸೃಷ್ಠಿಸಿದೆ. ಈ ನಡುವೆ ಅಂಡರ್ ಪಾಸ್‌ನಲ್ಲಿ ತುಂಬಿದ್ದ ನೀರಿನಲ್ಲಿ ಕೆಎಸ್ಆರ್‌ಟಿಸಿ ಬಸ್ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ.

ಮಂಗಳೂರಿನಲ್ಲಿ ನಿನ್ನೆ ಸಂಜೆಯಿಂದಲೇ ಎಡೆಬಿಡದೆ ಮಳೆಯಾಗುತ್ತಿದೆ. ಮಳೆ ಅಬ್ಬರಕ್ಕೆ ಹಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿದೆ. ಈ ನಡುವೆ ಮಂಗಳೂರಿನ ಪಡೀಲ್ ರೈಲ್ವೇ ಅಂಡರ್ ಪಾಸ್‌ನಲ್ಲಿ ನೀರು ನಿಂತಿದ್ದು ಈ ನೀರಿನಲ್ಲಿ ಕೆಎಸ್ಆರ್‌ಟಿಸಿ ಬಸ್ ಒಂದು ಸಿಕ್ಕಿಹಾಕಿಕೊಂಡಿದೆ.

ನೀರು ನಿಂತಿದ್ದರೂ ಬಸ್ ಚಾಲಕ ನೀರಿನಲ್ಲೇ ಬಸ್‌ನ್ನು ಓಡಿಸಿದ್ದಾನೆ. ಈ ವೇಳೆ ಬಸ್ಸಿನೊಳಗೆ ನೀರು ನುಗ್ಗಿ ತಾಂತ್ರಿಕ ದೋಷದಿಂದ ನೀರು ಮಧ್ಯೆದಲ್ಲೇ ಬಸ್ ಬಾಕಿಯಾಗಿದೆ. ಬಸ್‌ನೊಳಗಿದ್ದ ಪ್ರಯಾಣಿಕರು ಇಳಿಯಲಾಗದೆ ಬಸ್‌ನಲ್ಲೇ ಪರದಾಟ ಪರಿಸ್ಥಿತಿ ಉಂಟಾಗಿತ್ತು. ಮಂಗಳೂರು ನಗರದಿಂದ ಪಡೀಲ್, ಬಜಾಲ್, ಜಲ್ಲಿಗುಡ್ಡೆ ಪ್ರದೇಶಕ್ಕೆ ತೆರಳುವ ಬಸ್‌ಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತದೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ