ಭೂಸೇನೆ ಯೋಧರಿಂದ ಕೋಟಿ ಗೀತಾ ಯಜ್ಞ ದೀಕ್ಷೆ

ಉಡುಪಿ : ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಉಡುಪಿಯಲ್ಲಿ ಯುವಕರಿಗೆ ತರಬೇತಿ ನೀಡಲು ಬಂದಿರುವ ಕೇರಳ ಮೂಲದ ಉಣ್ಣಿ ಕೃಷ್ಣನ್‌, ಗುಜರಾತ್‌ ಮೂಲದ ಅಶೋಕ್‌ ತಕ್ಕರ್‌ ಅವರಿಗೆ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಕೋಟಿ ಗೀತಾ ಯಜ್ಞ ದೀಕ್ಷೆ ನೀಡಿದರು.

ಭಗವದ್ಗೀತೆಯ ಮೇಲೆ ವಿಶೇಷ ಭಕ್ತಿ, ಆಸಕ್ತಿ ಹೊಂದಿರುವ ಅವರು ಸ್ಥಳೀಯ ಜನರಿಂದ ಮಾಹಿತಿ ಪಡೆದು ಸ್ವತಃ ಉತ್ತೇಜಿತರಾಗಿ ಗೀತಾಮಂದಿರಕ್ಕೆ ಬಂದು ದೀಕ್ಷೆ ಸ್ವೀಕರಿಸಿ, ಶ್ರೀಪಾದರಿಂದ ಫ‌ಲ ಮಂತ್ರಾಕ್ಷತೆಯೊಂದಿಗೆ ಆಶೀರ್ವಾದ ಪಡೆದರು.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ