ಜ.19 ರಂದು “ಕೋಟಿ – ಚೆನ್ನಯ ಕ್ರೀಡೋತ್ಸವ 2025” ಇದರ ಲಾಂಛನ ಬಿಡುಗಡೆ ಹಾಗೂ ಆಮಂತ್ರಣ ಪತ್ರ ಬಿಡುಗಡೆ…!

ಬಂಟ್ವಾಳ : ಬಂಟ್ವಾಳ ‌ತಾಲೂಕು‌ ಬಿಲ್ಲವ ಸೇವಾ ಸಂಘ ಹಾಗೂ ಯುವವಾಹಿನಿ ಹಾಗೂ ಬಿಲ್ಲವ ಮಹಿಳಾ ಸಮಿತಿ ಇವರ ಜಂಟಿ ಆಶ್ರಯದಲ್ಲಿ ಜ.19 ರಂದು ನಡೆಯುವ ತಾಲೂಕು ಮಟ್ಟದ “ಕೋಟಿ – ಚೆನ್ನಯ ಕ್ರೀಡೋತ್ಸವ 2025” ಇದರ ಲಾಂಛನ ಬಿಡುಗಡೆ ಹಾಗೂ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಬಿಸಿರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ಭಾನುವಾರ ನಡೆಯಿತು.

ಲಾಂಛನ ಬಿಡುಗಡೆಗೊಳಿಸಿದ ಉದ್ಯಮಿ, ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಟ್ರಸ್ಟಿ ಜಗದೀಶ್ ಡಿ.ಸುವರ್ಣ ಮಾತನಾಡಿ, ಬಹಳ ಅರ್ಥಪೂರ್ಣವಾಗಿ ಕೋಟಿ – ಚೆನ್ನಯ ಕ್ರೀಡೋತ್ಸವ ಕಾರ್ಯಕ್ರಮದ ಲಾಂಛನ ಬಿಡುಗಡೆಯಾಗಿದೆ, ಮುಂದೆ ನಡೆಯುವ ಕ್ರೀಡೋತ್ಸವ ಕಾರ್ಯಕ್ರಮವೂ ಅತ್ಯಂತ ಯಶಸ್ವಿಯಾಗಿ ನಡೆಯುವಲ್ಲಿ ಸಮಿತಿಯ ಜೊತೆ ಸಮಾಜದ ಬಾಂದವರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಮೂಲಕ ಸಮಾಜ ಮುಖಿಯಾದ ಉತ್ತಮ ಕಾರ್ಯ ನಡೆಯಲಿ ‌ಎಂದು ತಿಳಿಸಿದ, ಅವರು ಬಿಲ್ಲವ ಸಮಾಜದ ಯುವ ಕ್ರೀಡಾಪಟುಗಳು ಕ್ರೀಡೆಯ ಮೂಲಕ ಸಾಧನೆಯನ್ನು ಮಾಡಲು ಇಂತಹ ಕ್ರೀಡೋತ್ಸವ ಕಾರ್ಯಕ್ರಮ ಬಾರಿ ಅಗತ್ಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಗುರುಕೃಪಾ ಸಂಜೀವ ಪೂಜಾರಿ ಮಾತನಾಡಿ, ಶಿಸ್ತುಬದ್ದವಾದ ಕಾರ್ಯಕ್ರಮ ಮೂಡಿಬರುವ ಮೂಲಕ, ತಾಲೂಕಿನ ಬಿಲ್ಲವರು ಸಂಘಟಿತರಾಗಲು ಕ್ರೀಡೋತ್ಸವ ಕಾರ್ಯಕ್ರಮ ಸಕಾಲಿಕವಾಗಿದೆ. ಪಕ್ಷ ಬೇಧ ಮರೆತು ಮನೆಯ ಕಾರ್ಯಕ್ರಮ ಎಂಬ ದೃಷ್ಟಿಯಿಂದ ಭಾಗವಹಿಸಿ ಎಂದು ಮನವಿ ಮಾಡಿದರು.

ತಾಲೂಕು ಬಿಲ್ಲವ ಸಂಘದ ಮಾಜಿ ಅಧ್ಯಕ್ಷರುಗಳಾದ ಹರಿಕೃಷ್ಣ ಬಂಟ್ವಾಳ್, ಚಂದ್ರಶೇಖರ ಪೂಜಾರಿ, ರಾಮಪ್ಪ ಪೂಜಾರಿ ಮಾರ್ನಬೈಲು, ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಎಮ್ ತುಂಬೆ, ಯುವವಾಹಿನಿ ಅಧ್ಯಕ್ಷ ದಿನೇಶ್ ರಾಯಿ, ಬಿಲ್ಲವ ಮಹಿಳಾ ಸಮಿತಿ ಅಧ್ಯಕ್ಷೆ ಶೈಲಜಾ ರಾಜೇಶ್, ಪ್ರಚಾರ ಸಮಿತಿ ಸಂಚಾಲಕ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಕೋಶಾಧಿಕಾರಿ ಆನಂದ ಶಂಭೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೋಟಿ ಚೆನ್ನಯ ಕ್ರೀಡೋತ್ಸವ ಕಾರ್ಯಕ್ರಮದ ಸಂಚಾಲಕ ಬೇಬಿ ಕುಂದರ್ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಮೇಶ್ ಎಮ್ ತುಂಬೆ ವಂದಿಸಿದರು. ಧನ್ಯವಾದ ನೀಡಿದರು. ಯುವವಾಹಿನಿ ಅಧ್ಯಕ್ಷ ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು.

Related posts

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್