ಕೋಟ ಜೀವನ್ ಮಿತ್ರ ಸೇವಾ ಟ್ರಸ್ಟ್ ಇದರ ದಶಮಾನೋತ್ಸವ ಸಂಭ್ರಮಾಚರಣೆಯ ಪೋಸ್ಟರ್ ಬಿಡುಗಡೆ

ಕೋಟ : ಕೋಟ ಜೀವನ್ ಮಿತ್ರ ಸೇವಾ ಟ್ರಸ್ಟ್ ಹಾಗೂ ಜೀವನ್ ಮಿತ್ರ ಆಂಬುಲೆನ್ಸ್ ಕೋಟ ಇದರ ದಶಮಾನೋತ್ಸವ ಸಂಭ್ರಮಾಚರಣೆಯ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಇಂದು ಕೋಟ ಶ್ರೀ ಅಮೃತೇಶ್ವರಿ ದೇಗುಲದಲ್ಲಿ ನಡೆಯಿತು.

ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಅವರು ಜೀವನ್ ಮಿತ್ರ ಸೇವಾ ಟ್ರಸ್ಟ್ ಕೋಟ, ಜೀವನ್ ಮಿತ್ರ ಆಂಬ್ಯುಲೇನ್ಸ್ ಇದರ ದಶಮಾನೋತ್ಸವ ಸಂಭ್ರಮಾಚರಣೆಯ ಪೋಸ್ಟರ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ ಜೀವರಕ್ಷಕ ಕಾರ್ಯದ ಮೂಲಕ ಸಾಮಾಜಿಕ ಬದ್ದತೆಯನ್ನು ಜೀವನ್ ಮಿತ್ರ ಸಾಕ್ಷಿಕರಿಸಿದೆ. ಸೇವೆಯೇ ಮೂಲ ಮಂತ್ರವಾಗಿರಿಸಿ ಸಮಾಜದ ಋಣ ತಿರಿಸುವ ಕಾರ್ಯ ಶ್ರೇಷ್ಠವಾದದ್ದು ಈ ನಿಟ್ಟಿನಲ್ಲಿ ದಶ ಸಂವತ್ಸರಗಳನ್ನು ಈ ಸಮಾಜಕ್ಕೆ ನೆರವಿನ ಮೂಲಕ ಉಣಬಡಿಸಿದ ಜೀವನ್ ಮಿತ್ರ ಟ್ರಸ್ಟ್ ಕಾರ್ಯ ನಿಜಕ್ಕೂ ಪ್ರಶಂಸನೀಯ ಎಂದು ಕಾರ್ಯದ ಯಶಸ್ಸಿಗೆ ಶುಭಕೋರಿದರು.

ಜೀವನ್ ಮಿತ್ರ ಸೇವಾ ಟ್ರಸ್ಟ್‌ನ ಮುಖ್ಯಸ್ಥ ನಾಗರಾಜ್ ಪುತ್ರನ್ ಮಾತನಾಡಿ ಆಗಸ್ಟ್ 15‌ರಂದು ಟ್ರಸ್ಟ್ ದಶಮಾನೋತ್ಸವ ಪ್ರಯುಕ್ತ ಆಶಕ್ತರಿಗೆ ಸಹಾಯ, ಗ್ರಾಮೀಣ ಕ್ರೀಡೆ, ಸನ್ಮಾನ, ಪ್ತಶಸ್ತಿ, ಗೌರವಾರ್ಪಣೆ ಜರಗಲಿದೆ ಎಂದರು.

ಕಾರ್ಯಕ್ರಮದಲ್ಲಿ ನಾಗೇಂದ್ರ ಪುತ್ರನ್ ಬಾರಿಕೆರೆ, ಕೋಟತಟ್ಟು ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಕೋಟ ಗ್ರಾ.ಪಂ ಸದಸ್ಯ ಎಂ ಜಯರಾಮ ಶೆಟ್ಟಿ, ಭುಜಂಗ ಗುರಿಕಾರ, ಕೋಟತಟ್ಟು ಗ್ರಾ.ಪಂ ಸದಸ್ಯ ರವೀಂದ್ರ ತಿಂಗಳಾಯ, ನ್ಯಾಯವಾದಿ ಶ್ಯಾಮಸುಂದರ ನಾಯರಿ, ಸಾಮಾಜಿಕ ಕಾರ್ಯಕರ್ತರಾದ ನಾಗರಾಜ್ ಗಾಣಿಗ ಸಾಲಿಗ್ರಾಮ, ಕೋಟ ಶ್ರೀಕಾಂತ್ ಶೆಣೈ, ಭೋಜ ಪೂಜಾರಿ ಗಿಳಿಯಾರು, ವಸಂತ ಕಾಂಚನ್ ಗುಂಡ್ಮಿ, ಜೀವನ್ ಮಿತ್ರ ಬಳಗದ ವಸಂತ ಸುವರ್ಣ, ಸಂತೋಷ್ ತೆಕ್ಕಟ್ಟೆ, ಶಶಿಧರ ಕುಂದರ್, ಆನಂದ್ ಟೈಲರ್, ಹರ್ತಟ್ಟು ಯುವಕ ಮಂಡಲದ ಪ್ರಮುಖರಾದ ಕೀರ್ತಿಶ ಪೂಜಾರಿ, ಯಕ್ಷ ಸೌರಭ ಕಲಾರಂಗದ ಸ್ಥಾಪಾಕಾಧ್ಯಕ್ಷ ಹರೀಶ್ ಭಂಢಾರಿ, ಧನುಷ್ ವಡ್ಡರ್ಸೆ, ಸ್ವದೇಶ್ ಕಾಸನಗುಂದ್ ಮತ್ತಿತರರು ಉಪಸ್ಥಿತರಿದ್ದರು.

ಕೋಟ ಗ್ರಾಮ ಪಂಚಾಯತ್ ಸದಸ್ಯ ಚಂದ್ರ ಆಚಾರ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.

Related posts

ಕನ್ನಡ ಭಾಷೆಯ ಬಗೆಗಿನ ಒಲವು ಎಲ್ಲರಲ್ಲೂ ಮೂಡಬೇಕು – ಜನಾರ್ದನ್ ಕೊಡವೂರು ​

ಮಲಗಿದಲ್ಲೇ ವ್ಯಕ್ತಿ ಮೃತ್ಯು

ಚಾಲಕನ ನಿಯಂತ್ರಣ ತಪ್ಪಿದ ಸಿಮೆಂಟ್ ರೆಡಿಮಿಕ್ಸ್ ಲಾರಿ ಪಲ್ಟಿ – ತಪ್ಪಿದ ಭಾರಿ ದುರಂತ