ಕೊಲ್ಲೂರು ದೇಗುಲ : ಡಿಸೆಂಬರ್‌ನಲ್ಲಿ ದಾಖಲೆ 1.39 ಕೋ.ರೂ. ಕಾಣಿಕೆ ಸಂಗ್ರಹ

ದಕ್ಷಿಣ ಭಾರತದ ಮುಂಚೂಣಿ ದೇವಿ ಶಕ್ತಿಪೀಠ ಕೊಲ್ಲೂರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ದೇವಳಕ್ಕೆ ರಾಜ್ಯ, ಹೊರರಾಜ್ಯದ ದಾಖಲೆ ಭಕ್ತರು ಹರಿದುಬಂದಿದ್ದಾರೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಕಾಣಿಕೆ ಡಬ್ಬಿಯಲ್ಲಿ ಡಿಸೆಂಬರ್ ತಿಂಗಳ ಆದಾಯ ನಗದು 1,39,02,474 ರೂ. ಆಗಿದ್ದು, ಇದು ದಾಖಲೆಯ ಕಾಣಿಕೆ ಸಂಗ್ರಹವಾಗಿದೆ.

ಕಳೆದ 2023 ಡಿಸೆಂಬರ್‌ನಲ್ಲಿ 90 ಲಕ್ಷ ರೂ.ನಷ್ಟು ನಗದು ಸಂಗ್ರಹವಾಗಿತ್ತು. ಈ ಬಾರಿ 460 ಗ್ರಾಂ. ಚಿನ್ನ, 2 ಕೆ.ಜಿ. 800 ಗ್ರಾಂ ಬೆಳ್ಳಿ, ಸಂಗ್ರಹವಾಗಿದೆ. ಜನವರಿ 28ರಂದು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಕಾರ್ಯನಿರ್ವಹಣಾಧಿ‌ಕಾರಿ ಪ್ರಶಾಂತ ಕುಮಾ‌ರ್ ಶೆಟ್ಟಿ, ಸಮಿತಿ ಸದಸ್ಯರು, ಸಿಬಂದಿಗಳ ಸಮ್ಮುಖದಲ್ಲಿ ಹಣ ಎಣಿಕೆ ನಡೆದಿತ್ತು.

Related posts

ಕೆಲಸಕ್ಕೆಂದು ಹೋದ ಯುವಕ ಮರಳಿ ಬಾರದೇ ನಾಪತ್ತೆ

ಪರಾರಿಯಾಗಲು ಯತ್ನಿಸಿದ ಆರೋಪಿಯ ರಾದ್ಧಾಂತ : ಸರಣಿ ಅಪಘಾತ, ಪೊಲೀಸರಿಂದ ಸಿನಮೀಯ ಶೈಲಿಯಲ್ಲಿ ಬಂಧನ

ಬಜೆಟ್ ಅಧಿವೇಶನ ಮುಗಿದ ಕೂಡಲೇ ಹಕ್ಕುಪತ್ರ ವಿತರಣೆಗೆ ಗಂಟಿಹೊಳೆ ಸೂಚನೆ