ಕ್ರೈಸ್ತ ವಿದ್ಯಾರ್ಥಿನಿಯ ಆಪಹರಣ ಹಾಗೂ ಲವ್ ಜಿಹಾದ್ ಪ್ರಕರಣ – ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಆಕ್ರೋಶ

ಉಡುಪಿ : ಇತ್ತೀಚಿಗೆ ನಡೆದ ಉಡುಪಿಯ ಕ್ರೈಸ್ತ ವಿದ್ಯಾರ್ಥಿನಿಯ ಆಪಹರಣ ಹಾಗೂ ಲವ್ ಜಿಹಾದ್ ಪ್ರಕರಣದ ಬಗ್ಗೆ ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ ಯಾಕೆ ತುಟಿ ಬಿಚ್ಚುತ್ತಿಲ್ಲ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ರುಢಾಲ್ಫ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತನ್ನದೇ ಧರ್ಮದ ಯುವತಿಯನ್ನು ಅಪಹರಿಸಿ ಬ್ಲಾಕ್ ಮೇಲ್ ಮಾಡಿ ಲವ್ ಜಿಹಾದ್ ಮಾಡಲು ಹೊರಟಿರುವ ಅಕ್ರಮ್ ಎಂಬ ರೌಡಿ ಶೀಟರ್‌ನನ್ನು ಬಂಧಿಸಲು ಮೀನ ಮೇಷ ಎಣಿಸುತ್ತಾ ಕಾಲ ಹರಣ ಮಾಡುತ್ತಿರುವ ಉಡುಪಿ ನಗರ ಪೊಲೀಸ್ ಠಾಣೆಯ ವರ್ತನೆಯನ್ನು ಖಂಡಿಸದೇ ದಿವ್ಯ ಮೌನ ವಹಿಸಿರುವ ಪ್ರಶಾಂತ್ ಜತ್ತನ್ ನಡೆಯನ್ನು ಅವಲೋಕಿಸಿದರೆ ಪರೋಕ್ಷವಾಗಿ ಅವರು ಲವ್ ಜಿಹಾದ್‌ಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ ಎಂದು ರುಡಾಲ್ಪ್ ಡಿಸೋಜ ತಿಳಿಸಿದ್ದಾರೆ.

ರಾಜ್ಯದಲ್ಲಿ ಅಲ್ಪಸಂಖ್ಯಾತರ ಪರ – ಕ್ರೈಸ್ತರ ಪರ ಎಂದು ವಾದಿಸುವ ಸರಕಾರವಿದ್ದರೂ, ಅಪಹರಣಗೊಂಡ ಯುವತಿಯ ಹೆತ್ತವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ, ಅವರಿಗೆ ಯಾವುದೇ ಸಹಾಯ ಮಾಡದೇ ಒಂದೇ ಕೋಮಿನ ಒಲೈಕೆಯಲ್ಲಿ ನಿರತರಾಗಿರುವ ಪ್ರಶಾಂತ್ ಜತ್ತನ್ ವರ್ತನೆಯನ್ನು ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಪೊಲೀಸ್ ಇಲಾಖೆ ಕೂಡಲೇ ಆರೋಪಿಯನ್ನು ಬಂಧಿಸಿ ಯುವತಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ತಪ್ಪಿದಲ್ಲಿ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಉಗ್ರ ಹೋರಾಟಕ್ಕೆ ಮುಂದಾಗಲಿದೆ ಎಂದು ರುಡಾಲ್ಫ್ ಡಿಸೋಜ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಅಪ್ತಿ ಆಚಾರ್ಯ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ

ನಾಗರಿಕ ಸಮಿತಿಯ ನೇತೃತ್ವದಲ್ಲಿ ಅಪರಿಚಿತ ಶವದ ಅಂತ್ಯ ಸಂಸ್ಕಾರ

ದಲಿತ ಚಿಂತಕ ಜಯನ್ ಮಲ್ಪೆಗೆ ರಾಜ್ಯ ಸರಕಾರದಿಂದ ಡಾ|ಬಾಬು ಜಗಜೀವನ ರಾಂ ಪ್ರಶಸ್ತಿ