ಅಕ್ರಮ ಜುಗಾರಿ ಅಡ್ಡೆಗೆ ಖಾಕಿ ರೇಡ್ : 11 ಮಂದಿ ಅಂದರ್

ಕಾರ್ಕಳ : ಅಂದರ್ – ಬಾಹರ್ ಅಕ್ರಮ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ನಗದು ಸಹಿತ ಜುಗಾರಿ ಆಡುತ್ತಿದ್ದ 11 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಭಾನುವಾರ ಬೆಳಿಗ್ಗೆ ಆನೆಕೆರೆ ಬೈಪಾಸ್ ಬಳಿ ಸರಕಾರಿ ಆಸ್ಪತ್ರೆಯ ಎದುರುಗಡೆ ಹೊಸದಾಗಿ ನಿರ್ಮಾಣ ಆಗುತ್ತಿರುವ ಕಟ್ಟಡದ ಹಿಂಬದಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿರಿಸಿ ಅಂದರ್ – ಬಾಹರ್ ಎಂಬ ಹೆಸರಿನ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಕಾರ್ಕಳ ನಗರ ಪಿಎಸ್‌ಐ ಸಂದೀಪ ಕುಮಾರ್ ಶೆಟ್ಟಿ ಮತ್ತವರ ತಂಡ ಸ್ಥಳದಲ್ಲಿದ್ದ ಆರೋಪಿಗಳನ್ನು ವಶಕ್ಕೆ ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ಶ್ರೀನಿವಾಸ, ಮಂಜುನಾಥ (30), ಮುತ್ತಣ್ಣ (21), ಮಂಜುನಾಥ (31), ನಾಗರಾಜ ಉಪ್ಪಾರ (47), ಲಕ್ಷಣ್, ಹೇಮನ್, ಚಿರಂಜೀವಿ, ಯಮನೂರಪ್ಪ (20), ಹಾಗೂ ಮಲ್ಲಯ್ಯ (20) ಎಂಬವರನ್ನು ವಶಕ್ಕೆ ಪಡೆದು, ಬಂಧಿತರಿoದ ಆಟಕ್ಕೆ ಬಳಸಿದ್ದ 4950/- ರೂ. ನಗದು, ಇಸ್ಪೀಟ್ ಎಲೆ ಹಾಗೂ ಇನ್ನಿತರ ಪರಿಕರಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !