ಇ‌ಸ್ಪೀಟ್ ಅಡ್ಡೆಗೆ ಖಾಕಿ ರೇಡ್ : ಎಂಟು ಮಂದಿ ಅಂದರ್

ಕಾರ್ಕಳ : ಇಸ್ಪೀಟ್ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಎಂಟು ಮಂದಿಯನ್ನು ವಶಕ್ಕೆ ಪಡೆದ ಘಟನೆ ಜು. 5ರಂದು ಕಾರ್ಕಳ ತಾಲೂಕಿನ ಬೋಳದಲ್ಲಿ ಸಂಭವಿಸಿದೆ.

ಬೋಳ ಗ್ರಾಮದ ಪೊಸರ್ಮೆ ಎಂಬಲ್ಲಿ ಶ್ರೀನಿವಾಸ ಎಂಬುವವರಿಗೆ ಸಂಬಂಧಪಟ್ಟ ಹಳೆ ರೈಸ್ ಮಿಲ್ಲಿನ ಶೆಡ್‌ನಲ್ಲಿ ಶ್ರೀನಿವಾಸ, ಸಂತೋಷ್, ಶ್ರೀನಿವಾಸ, ಅಶೋಕ್, ರಾಜೇಶ್, ಕೃಷ್ಣ, ರವೀಂದ್ರ ಹಾಗೂ ಶಿವಾನಂದ ಎಂಬವರು ಇಸ್ಪೀಟು ಎಲೆಗಳನ್ನು ಹರಡಿಕೊಂಡು ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಎಂಬ ಜುಗಾರಿ ಆಟವನ್ನು ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕ ದಿಲೀಪ್ ಜಿ. ಆರ್. ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಆರೋಪಿತರನ್ನು ವಶಕ್ಕೆ ಪಡೆದು, ಇಸ್ಪೀಟು ಆಟಕ್ಕೆ ಬಳಸಿದ 25,720/- ನಗದು ಹಾಗೂ 159 ಇಸ್ಪೀಟ್ ಎಲೆಗಳು ಮತ್ತು ಕಾರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಅಣ್ಣನಿಂದ ಲಕ್ಷಾಂತರ ರೂ. ಚಿನ್ನ ಪಡೆದು ತಂಗಿಯಿಂದಲೇ ವಂಚನೆ

ಬೆಳಕು ಮೀನುಗಾರಿಕೆ ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧ – ಉಲ್ಲಂಘಿಸಿದರೆ ಕಠಿಣ ಕ್ರಮ

ಮಾ.31ರಂದು ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಮಲತಾಯಿ ಧೋರಣೆ ತೋರಿದ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ