ಕೋಳಿ ಅಂಕಕ್ಕೆ ಖಾಕಿ ರೇಡ್ : ಏಳು ಮಂದಿ ಅಂದರ್

ಶಿರ್ವ : ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು 7 ಮಂದಿಯನ್ನು ವಶಕ್ಕೆ ಪಡೆದ ಘಟನೆ ಮೂಡುಬೆಳ್ಳೆ ಗೂಡುದೊಟ್ಟು ಎಂಬಲ್ಲಿ ನಡೆದಿದೆ.

ಆರೋಪಿಗಳನ್ನು ವಿಜಯ್ ಪ್ರಕಾಶ್ ಕ್ವಾಡ್ರಸ್, ಸುರೇಶ್, ಫ್ರಾನ್ಸಿಸ್ ದೀಪಕ್ ಮೆಂಡೋನ್ಸ್‌, ಪ್ರಜ್ವಲ್ ಜೋಸೆಫ್‌ ಮಾರ್ಟೀಸ್, ಪ್ರದೀಪ್, ಸಂತೋಷ್, ಸುಜಿತ್ಯ ಎಂದು ಗುರುತಿಸಲಾಗಿದೆ.

ಇವರಿಂದ 4 ಜೀವಂತ ಹುಂಜ ಕೋಳಿಗಳು, 2 ಕತ್ತಿ ಬಾಲು, 7,850ರೂ. ನಗದು, ರಿಕ್ಷಾ ಮತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ