ಕೇರಳ ಸಿಎಂ ಪಿಣರಾಯಿ ವಿಜಯನ್ ಸನಾತನ ಹಿಂದೂ ಧರ್ಮದ ಶತ್ರು- ಸುನಿಲ್ ಕುಮಾರ್

ಉಡುಪಿ : ಸಮಾಜ ಸುಧಾರಕ, ಸನಾತನ ಧರ್ಮದ ಪ್ರತಿಪಾದಕ ಶ್ರೀನಾರಾಯಣ ಗುರುಗಳನ್ನು ಸನಾತನ ಧರ್ಮದ ಶತ್ರು ಎಂದು ಬಿಂಬಿಸುವ ಮೂಲಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಾರಾಯಣ ಗುರುಗಳನ್ನು ಅವಮಾನಿಸಿದ್ದಾಾರೆ. ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆೆ ತಂದಿದ್ದಾರೆ. ಅವರ ಹೇಳಿಕೆ ದುರುದ್ದೇಶಪೂರಿತ ಮತ್ತು ಸಂಪೂರ್ಣ ಖಂಡನೀಯ. ತರ್ಕಬದ್ಧ ಚಿಂತನೆಯನ್ನು ಉತ್ತೇಜಿಸುವ ನೆಪದಲ್ಲಿ ಹಿಂದೂ ನಂಬಿಕೆಗಳನ್ನು ಅವರು ಅವಮಾನಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.

ಸನಾತನ ಧರ್ಮವನ್ನು ದ್ವೇಷಿಸಬೇಕು ಎಂಬುದು ವಿಜಯನ್ ಅವರ ಶಿವಗಿರಿ ಸಮಾವೇಶದಲ್ಲಿ ಭಾಷಣದ ತಿರುಳು. ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸುವೆ. ಅವರ ಹೇಳಿಕೆ ಹಿಂದೂಗಳನ್ನು ಘಾಸಿಗೊಳಿಸಿದೆ. ಅವರ ಮಾತುಗಳು ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂಬ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯ ಮುಂದುವರಿದ ಭಾಗದಂತಿದೆ. ಹಿಂದೂಗಳ ಮೇಲೆ ನಿರಂತರ ದಾಳಿ, ದಬ್ಬಾಳಿಕೆ, ಕೊಲೆಯಂತಹ ಪೈಶಾಚಿಕ ಕೃತ್ಯ ನಡೆಸಿಕೊಂಡು ಹಿಂದೂಗಳ ಮೇಲಿನ ಅಕ್ರಮಣವನ್ನು ಪೋಷಿಸಿದ ಪ್ಯಾಸಿಸ್ಟ್ ಪಿಣರಾಯಿ ನೇತ್ರತ್ವದ ಕೇರಳ ಸರಕಾರ ಇದೀಗ ಹಿಂದೂ ಧರ್ಮ ಪ್ರತಿಪಾದಕರನ್ನು ನಿಂದಿಸಿ, ಧರ್ಮದ ಅವಹೇಳನಕ್ಕೆ ಮುಂದಾಗಿದೆ. ಹಿಂದೂ ಸಮಾಜ ಸುಧಾರಕರ ವಿರುದ್ಧ ಅಲ್ಲಿನ ಸರಕಾರ ಮಾತನಾಡಲು ಆರಂಭಿಸಿದೆ. ಕಮ್ಯುನಿಸ್ಟ್‌ನ ಹಿಂದೂ ವಿರೋಧಿ ಇಂತಹ ದ್ವೇಷ ಪ್ರಚಾರವನ್ನು ಕೇರಳದ ಜನರು ತಿರಸ್ಕರಿಸಬೇಕು. ಅಲ್ಲದೆ ಸಮಾಜ ಸುಧಾರಕರ ವಿರುದ್ಧ ಇಷ್ಟೊಂದು ಕೆಳ ಮಟ್ಟಕ್ಕೆೆ ಇಳಿದು ಸಾರ್ವಜನಿಕವಾಗಿ ಮಾತನಾಡಿದ ಕೇರಳ ಸಿಎಂ ವಿರುದ್ಧ ಸಮಸ್ತ ಹಿಂದೂಗಳು ತರಾಟೆಗೆ ತೆಗೆದುಕೊಂಡು ಸಿ.ಎಂ ವಿರುದ್ದ ಎದ್ದೇಳಬೇಕು ಎಂದರು.

ಹಿಂದೂ ಧರ್ಮ ಪ್ರತಿಪಾದಕರ ಬಗ್ಗೆೆ ಬಾಲಿಶ ಹೇಳಿಕೆ ನೀಡುವ ಪಿಣರಾಯಿ ಅನ್ಯ ಧರ್ಮದ ಧರ್ಮಗುರುಗಳ ಬಗ್ಗೆೆ ಇಂತಹ ಮಾತುಗಳನ್ನು ಹೇಳಲು ಸಿಎಂಗೆ ಧೈರ್ಯವಿದೆಯೇ ಎಂದು ಸವಾಲು ಹಾಕಿದರು.

Related posts

ಮೆಸ್ಕಾಂ ಎಟಿಪಿ ಬಿಲ್ ಪಾವತಿ ಸೇವೆ ಪುನರಾರಂಭಿಸಿ : ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹ

ಸಿಬಿಐ ಅಧಿಕಾರಿ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

ಉಡುಪಿ ನಗರದ ಅಭಿವೃದ್ಧಿ – ಸಮಸ್ಯೆ ಬಗ್ಗೆ ಚರ್ಚೆ; ಉಡುಪಿ ಶಾಸಕರು, ನಗರಸಭೆ ಅಧ್ಯಕ್ಷರೊಂದಿಗೆ ಪತ್ರಕರ್ತಕರ ಸಂವಾದ