ಶ್ರೀ ಕೃಷ್ಣಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವದ ಸಂಭ್ರಮ – ವೈಭವದ ರಥೋತ್ಸವ

ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವದ ಪ್ರಯುಕ್ತ ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಪಾದರು ರಥಬೀದಿಯ ಸುತ್ತಲೂ ಹಣತೆಯನ್ನಿಟ್ಟು ದೀಪೋತ್ಸವಕ್ಕೆ ಚಾಲನೆಯನ್ನು ನೀಡಿದರು.

ಬಳಿಕ ಕೃಷ್ಣ ಮಠದ ಮಧ್ವ ಸರೋವರದಲ್ಲಿ ಶ್ರೀಪಾದರು ಕ್ಷೀರಾಭ್ದಿಯನ್ನು ಮಾಡಿ, ಅರ್ಘ್ಯವನ್ನು ನೀಡಿದರು.

ನಂತರ ಲಕ್ಷದೀಪೋತ್ಸವದ ಅಂಗವಾಗಿ ಮಧ್ವ ಸರೋವರದಲ್ಲಿ ಪಾರ್ಥ ಸಾರಥಿ ರಥದ ಮಾದರಿಯ ತೆಪ್ಪದಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರನ್ನಿಟ್ಟು ತೆಪ್ಪೋತ್ಸವವನ್ನು ನೆರವೇರಿಸಲಾಯಿತು. ಅಲಂಕೃತ ರಥಗಳಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರು ಹಾಗೂ ಅನಂತೇಶ್ವರ, ಚಂದ್ರೇಶ್ವರ ದೇವರನ್ನಿಟ್ಟು ರಥಬೀದಿಯ ಸುತ್ತಲೂ ವೈವಿಧ್ಯಮಯ ಲಕ್ಷ ದೀಪಗಳ ನಡುವೆ, ನಾದಸ್ವರ, ಪಂಚ ವಾದ್ಯ, ಚಂಡೆ ವಾದ್ಯಗಳೊಂದಿಗೆ ಆಕರ್ಷಕ ಸುಡುಮದ್ದು ಪ್ರದರ್ಶನದೊಂದಿಗೆ ತುಳಸಿ ಸಂಕೀರ್ತನೆಯೊಂದಿಗೆ ರಥೋತ್ಸವವು ಅತ್ಯಂತ ವೈಭವದಿಂದ ನಡೆಯಿತು. ಕೊನೆಗೆ ಮಧ್ವ ಮಂಟಪದಲ್ಲಿ ತೊಟ್ಟಿಲು ಪೂಜೆ ಸಂಪನ್ನಗೊಂಡಿತು.

Related posts

ಬಹು ನಿರೀಕ್ಷೆಯ `ಗಜಾನನ ಕ್ರಿಕೆಟರ್ಸ್’ 2026 ಜನವರಿಯಲ್ಲಿ ತೆರೆಗೆ….

Much Awaited Tulu movie Gajanana Cricketers set for worldwide release in January 2026

ಉಡುಪಿ ಪತ್ರಕರ್ತರ, ವೈದ್ಯಕೀಯ ಸಂಘದ ಸೂಚನಾ ಫಲಕ ಅನಾವರಣ