ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ನೂತನ ಪದಾಧಿಕಾರಿಗಳ ಆಯ್ಕೆ

ಉಡುಪಿ : ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ನೂತನ ಪದಾಧಿಕಾರಿಗಳ ಆಯ್ಕೆ ಅನ್ಸಾರ್ ಅಹಮದ್‌ರವರ ಅಧ್ಯಕ್ಷತೆಯಲ್ಲಿ ನೂತನವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಮಹಿಳಾ ಜಿಲ್ಲಾಧ್ಯಕ್ಷರಾದ ಜ್ಯೋತಿ ಸೇರಿಗಾರ್ತಿ‌ರವರ ನೇತೃತ್ವದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಸಮಿತಿ ರಚನೆಯಾಗಿ ಘೋಷಿಸಲಾಯಿತು.

ಕರವೇ ನೂತನ ಜಿಲ್ಲಾ ಉಪಾಧ್ಯಕ್ಷರಾಗಿ ಸಯ್ಯದ್ ನಿಜಾಮ್, ಅಲ್ಫೋನ್ಸ್ ಮಿನೇಜಸ್, ಸುಧೀರ್ ಪೂಜಾರಿ ಅವರನ್ನು ಆಯ್ಕೆ ಮಾಡಲಾಯಿತು.

ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ಪೂಜಾರಿ ಕಾರ್ಯದರ್ಶಿಯಾಗಿ ಸಂತೋಷ ಕುಲಾಲ ಸಂಘಟನಾ ಕಾರ್ಯದರ್ಶಿಯಾಗಿ ಗೋಪಾಲ್ ದೊರೆಯವರನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾ ಸಮಿತಿಯ ಸದಸ್ಯರಾಗಿ ಪ್ರಶಾಂತ್ ಸಾಲಿಯಾನ್ ಪಡುಬಿದ್ರೆ, ರತ್ನಾಕರ್ ಪೂಜಾರಿ, ರಾಘವೇಂದ್ರ ಪೂಜಾರಿ, ಪ್ರಕಾಶ್ ದೇವಾಡಿಗ, ನಾಗರಾಜ್ ಹಾಗೂ ರಾಜು ರವರನ್ನು ಆಯ್ಕೆ ಮಾಡಲಾಯಿತು.

ಮಹಿಳಾ ಜಿಲ್ಲಾ ಉಪಾಧ್ಯಕ್ಷರಾಗಿ ದೇವಕಿ ಬಾರ್ಕೂರು, ಕಿರಣ್ ಪ್ರತಾಪ್‌ರವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಅನುಷಾ ಆಚಾರ್ ಪಳ್ಳಿ, ಕಾರ್ಯದರ್ಶಿಯಾಗಿ ಡಾ.ಶಶಿಕಲಾ, ಸಂಘಟನಾ ಕಾರ್ಯದರ್ಶಿಯಾಗಿ ವಿಶಾಲಾಕ್ಷಿಯವರನ್ನು ಆಯ್ಕೆ ಮಾಡಲಾಯಿತು.

ಉಡುಪಿ ತಾಲೂಕು ಅಧ್ಯಕ್ಷರಾಗಿ ಯತೀಶ್, ಬ್ರಹ್ಮಾವರ ತಾಲೂಕು ಅಧ್ಯಕ್ಷರಾಗಿ ಸ್ಟ್ಯಾನಿ ಡಿಸೋಜ, ಕಾಪು ತಾಲೂಕು ಅಧ್ಯಕ್ಷರಾಗಿ ಚೇತನ್ ಪಡುಬಿದ್ರೆ, ಕಾರ್ಕಳ ತಾಲೂಕು ಅಧ್ಯಕ್ಷರಾಗಿ ಹನೀಫ್ ಕಾರ್ಕಳ, ಹೆಬ್ರಿ ತಾಲೂಕು ಅಧ್ಯಕ್ಷರಾಗಿ ವಿಜಯೇಂದ್ರ ಹೆಬ್ರಿ, ಬೈಂದೂರು ತಾಲೂಕು ಅಧ್ಯಕ್ಷರಾಗಿ ನಾಗೇಶ್‌ರವರು ಆಯ್ಕೆಯಾದರು.

ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಉಪಸ್ಥಿತರಿದ್ದರು.

Related posts

ತಂದೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪೆರೋಲ್‌ನಲ್ಲಿ ಉಡುಪಿಗೆ ಆಗಮಿಸಿದ ಭೂಗತ ಪಾತಕಿ ಬನ್ನಂಜೆ ರಾಜ

ಗ್ರಾಮೀಣ, ನಗರ ಪುನರ್ವಸತಿ ಕಾರ್ಯಕರ್ತರ ಹುದ್ದೆ : ಅರ್ಜಿ ಆಹ್ವಾನ

ಮನುಷ್ಯ ಪ್ರಕೃತಿಗೆ ಪೂರಕವಾಗಿಲ್ಲದ ಕಾರಣ ಅನಾರೋಗ್ಯಗಳು ಬಾಧಿಸುತ್ತಿವೆ : ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ