ಜರ್ಮನಿಯ ಬರ್ಲಿನ್‌‌ನಲ್ಲಿ ನಡೆದ ಶಟಲ್‌ ಬ್ಯಾಡ್ಮಿಂಟನ್‌ನಲ್ಲಿ ಕಾರ್ಕಳದ ಷಣ್ಮುಖ್‌ ರಾಜನ್‌ಗೆ ಚಿನ್ನ

ಕಾರ್ಕಳ : ಜರ್ಮನಿಯ ಬರ್ಲಿನ್‌ನಲ್ಲಿ ಡಿ. 7-8ರಂದು ನಡೆದ ಶಟಲ್‌ ಬ್ಯಾಡ್ಮಿಂಟನ್‌ನಲ್ಲಿ ಷಣ್ಮುಖ್‌ ರಾಜನ್‌ ಸಿಂಗಲ್ಸ್‌ನಲ್ಲಿ ಪ್ರಥಮ ಸ್ಥಾನಿಯಾಗಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಷಣ್ಮುಖ್‌ ರಾಜನ್‌ ಕಾರ್ಕಳದ ಸುಭಿತ್‌ ಎನ್‌.ಆರ್‌. ಮತ್ತು ಉಷಾ ಸುಭಿತ್‌ ದಂಪತಿಯ ಪುತ್ರ. ಇವರು ಜರ್ಮನಿಯ ಬರ್ಲಿನ್‌ನಲ್ಲಿ ಎಂ.ಬಿ.ಎ. ವಿದ್ಯಾಭ್ಯಾಸ ಮಾಡುತ್ತಿದ್ದು, ಕಾರ್ಕಳ ಜ್ಞಾನಸುಧಾ ಮತ್ತು ಶ್ರೀ ಭುವನೇಂದ್ರ ಕಾಲೇಜಿನ ಪೂರ್ವ ವಿದ್ಯಾರ್ಥಿ.

ಕಾರ್ಕಳದ ಜಾನ್ಸ್‌ ಶಟಲ್‌ ತರಬೇತಿ ಕೇಂದ್ರ ಹಾಗೂ ಮಂಗಳೂರಿನ ಅಲೋಸಿಯಸ್‌ ಕಾಲೇಜಿನಲ್ಲಿ ಶಟಲ್‌ ಬ್ಯಾಡ್ಮಿಂಟನ್‌ ತರಬೇತಿ ಪಡೆದಿದ್ದರು.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ