ಕಾರ್ಕಳ ಎಸ್‌ಐ ವರ್ಗಾವಣೆ ರದ್ದು…!

ಕಾರ್ಕಳ : ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಎಸ್‌ಐ ವರ್ಗಾವಣೆ ಆದೇಶ ಎರಡೇ ವಾರದಲ್ಲಿ ರದ್ದಾಗಿದೆ.

ಎಸ್‌ಐ ಆಗಿದ್ದ ದಿಲೀಪ್‌ ಅವರು ವರ್ಗಾವಣೆ ಹೊಂದಿ ಆ ಜಾಗಕ್ಕೆ ನಂಜಾ ನಾಯ್ಕ್‌ ನೇಮಕಗೊಂಡು ಕರ್ತವ್ಯಕ್ಕೂ ಹಾಜರಾಗಿದ್ದರು. ದಿಲೀಪ್‌ ಅವರು 2023ರ ಜುಲೈಯಲ್ಲಿ ಕಾರ್ಕಳ ಗ್ರಾಮಾಂತರ ಠಾಣೆ ಎಸ್‌ಐ ಆಗಿ ಕರ್ತವ್ಯ ವಹಿಸಿದ್ದರು. ಆದರೆ ದಿಲೀಪ್‌ ಅವರು ಒಂದೇ ವರ್ಷದಲ್ಲಿ ವರ್ಗಾವಣೆ ಹೊಂದಿದ್ದರು. ಆದರೆ, ಸರಕಾರದ ನಿಯಮದಂತೆ ಪೊಲೀಸ್‌ ಇಲಾಖೆಯಲ್ಲಿ ಎರಡು ವರ್ಷ ಸೇವೆ ಕಡ್ಡಾಯವಾಗಿತ್ತು. ಹಾಗಾಗಿ ತನ್ನ ವರ್ಗಾವಣೆಯನ್ನು ಪ್ರಶ್ನಿಸಿ ದಿಲೀಪ್‌ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಮೊರೆ ಹೋಗಿದ್ದರು. ಅಲ್ಲಿ ತೀರ್ಪು ನೀಡಿದ ನ್ಯಾಯಾಧೀಶರು ಎರಡು ವರ್ಷಗಳ ಸೇವಾವಧಿ ಪೂರ್ಣವಾಗದೆ ದಿಲೀಪ್‌ ಅವರನ್ನು ವರ್ಗಾವಣೆ ಮಾಡಬಾರದಾಗಿ ಆದೇಶಿಸಿದರು.

ನ್ಯಾಯಾಲಯದ ಆದೇಶ ಪುರಸ್ಕರಿಸಿದ ಪೊಲೀಸ್‌ ಐಜಿ, ದಿಲೀಪ್‌ ಅವರನ್ನು ಮತ್ತೆ ಕಾರ್ಕಳಕ್ಕೆ ನಿಯೋಜಿಸಿ, ನಂಜಾ ನಾಯ್ಕ ಅವರನ್ನು ಐಜಿ ಕಚೇರಿಗೆ ಕರೆಸಿಕೊಂಡಿರುತ್ತಾರೆ.

ಜು. 12ರಂದು ಗ್ರಾಮಾಂತರ ಠಾಣೆ ಎಸ್‌ಐ ಆಗಿ ಅಧಿಕಾರ ವಹಿಸಿದ ನಂಜಾ ನಾಯ್ಕ ಅವರು ಜು. 26ರವರೆಗೆ ಮಾತ್ರ ಅಲ್ಲಿ ಕಾರ್ಯನಿರ್ವಹಿಸಿರುತ್ತಾರೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ