ಕಾರ್ಕಳ ಅತ್ಯಾಚಾರ ಪ್ರಕರಣ – ನ್ಯಾಯಾಧೀಶರ ಮುಂದೆ ಯುವತಿಯ ಹೇಳಿಕೆ ದಾಖಲು

ಕಾರ್ಕಳ : ಕಾರ್ಕಳದಲ್ಲಿ ನಡೆದಿದ್ದ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸರು ಸಂತ್ರಸ್ತ ಯುವತಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಕಾರ್ಕಳ ಜೆಎಂಎಫ್‌ಸಿ ನ್ಯಾಯಾಧೀಶರ ಮುಂದೆ ಯುವತಿ ಹೇಳಿಕೆ ನೀಡಿದರು. ಸಿಆರ್‌ಪಿಸಿ 164 ನಿಯಮದಂತೆ ಸಂತ್ರಸ್ತೆಯ ಹೇಳಿಕೆಗಳನ್ಮು ದಾಖಲು ಮಾಡಲಾಯಿತು. ತನಿಖಾಧಿಕಾರಿ ಮಂಜಪ್ಪ ನೇತೃತ್ವದಲ್ಲಿ ಈ ಕಾನೂನು ಪ್ರಕ್ರಿಯೆ ನಡೆಯಿತು.

ಇದಕ್ಕೂ ಮುನ್ನ ಯುವತಿಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗಾಗಿ ದಾಖಲಿಸಲಾಗಿತ್ತು. ಇದೇ ತಿಂಗಳ ಆಗಸ್ಟ್ 23‌ರಂದು ಕಾರ್ಕಳದಲ್ಲಿ ಯುವತಿಯ ಮೇಲೆ ಅತ್ಯಾಚಾರ ನಡೆದಿತ್ತು. ಅತ್ಯಾಚಾರದ ಪ್ರಮುಖ ಆರೋಪಿ ಸಹಿತ ಈತನಕ ಐವರ ಬಂಧನವಾಗಿದೆ. ಅತ್ಯಾಚಾರ ಪ್ರಕರಣ ಸಂದರ್ಭ ಯುವತಿಗೆ ಮಾದಕ ವಸ್ತು ನೀಡಲಾಗಿದ್ದು ಈ ಕುರಿತು ಪ್ರತ್ಯೇಕ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.

Related posts

ಅಣ್ಣನಿಂದ ಲಕ್ಷಾಂತರ ರೂ. ಚಿನ್ನ ಪಡೆದು ತಂಗಿಯಿಂದಲೇ ವಂಚನೆ

ಬೆಳಕು ಮೀನುಗಾರಿಕೆ ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧ – ಉಲ್ಲಂಘಿಸಿದರೆ ಕಠಿಣ ಕ್ರಮ

ಮಾ.31ರಂದು ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಮಲತಾಯಿ ಧೋರಣೆ ತೋರಿದ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ