ಕಾರ್ಕಳ ಪರಶುರಾಮ ಪ್ರತಿಮೆ “ಕಂಚು – ಫೈಬರ್” ವಿವಾದ ಸದ್ದು; ಶಿಲ್ಪಿಯ ಗೋದಾಮಿನಿಂದ ಕಂಚು ಜಫ್ತಿ‌ ಮಾಡಿದ ಪೊಲೀಸರು!

ಕಾರ್ಕಳ : ಕಾರ್ಕಳದ ಬೈಲೂರು ಉಮಿಕ್ಕಳ ಬೆಟ್ಟದ ಮೇಲಿನ ಪರಶುರಾಮ ಥೀಂ ಪಾರ್ಕ್ ವಿವಾದ ಮತ್ತೆ ಸದ್ದು ಮಾಡಿದೆ. ನಕಲಿ ಪ್ರತಿಮೆ ಎನ್ನುವ ದೂರಿನ ಹಿನ್ನಲೆಯಲ್ಲಿ ಕಾರ್ಕಳ ನಗರ ಠಾಣೆ ಪೊಲೀಸರು ಪರಶುರಾಮ ಪ್ರತಿಮೆ ನಿರ್ಮಿಸಿದ ಕ್ರಿಷ್ ಆರ್ಟ್ ವರ್ಲ್ಡ್ ಮಾಲಕ ಕೃಷ್ಣ ನಾಯ್ಕ ಅವರಿಗೆ ಸೇರಿದ ಬೆಂಗಳೂರಿನ ಕೆಂಗೇರಿ ಗೋದಾಮಿನಲ್ಲಿ ಸ್ಥಳ ಮಹಜರು ನಡೆಸಿ ಮೂರ್ತಿಯ ಸೊಂಟದ ಮೇಲಿನ ಸುಮಾರು 9 ಟನ್ ತೂಕದ ಪ್ರತಿಮೆಯ ಬಿಡಿಭಾಗಗಳನ್ನು ವಶಕ್ಕೆ ಪಡೆದು ಕಾರ್ಕಳಕ್ಕೆ ತಂದಿದ್ದಾರೆ.

ಪೊಲೀಸರು ಸ್ಥಳ ತನಿಖೆಗೆ ತೆರಳಿದ ಸಂದರ್ಭ ಶಿಲ್ಪಿ ಕೃಷ್ಣ ನಾಯ್ಕ ಅವರು ಫೇಸ್‌ಬುಕ್ ಲೈವ್ ಬಂದು ಯಾವುದೇ ನೊಟೀಸ್ ನೀಡದೆ ಮೂರ್ತಿಯ ಭಾಗಗಳನ್ನು ಎತ್ತಿಕೊಂಡು ಹೋಗಿದ್ದಾರೆ. ಬಿಡಿಭಾಗಗಳನ್ನು ಅಸುರಕ್ಷಿತವಾಗಿ ತೆಗೆದುಕೊಂಡು ಹೋಗಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಇನ್ನೊಂದೆಡೆ ಕಾಂಗ್ರೆಸ್ ಮತ್ತು ಬಿಜೆಪಿ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದೆ. ಪರಶುರಾಮನ ಎರಡು ಕಾಲು ಬೆಟ್ಟದಲ್ಲಿದ್ದು‌, ಇನ್ನೆರಡು ಕಾಲು ಗೋದಾಮಿನಲ್ಲಿ ಪ್ರತ್ಯಕ್ಷವಾಗಿದೆ. ಹಾಗಾದರೆ ಎಷ್ಟು ಕಾಲು? ಎಂದು ಚರ್ಚೆ ನಡೆಯುತ್ತಿದೆ. ಮಾಜಿ ಸಚಿವ ಹಾಲಿ ಶಾಸಕ ಮತ್ತು ಪ್ರತಿಮೆ ನಿರ್ಮಾಣದ ರೂವಾರಿ ಸುನಿಲ್ ಕುಮಾರ್ ವಿರುದ್ಧ ಕಾಂಗ್ರೆಸ್ ಪಕ್ಷ ಮುಗಿಬಿದ್ದಿದ್ದು, ಇನ್ನೊಂದೆಡೆ
ಜಿಲ್ಲಾ ಬಿಜೆಪಿ ಸುನಿಲ್ ಕುಮಾರ್ ಪರ ಬ್ಯಾಟಿಂಗ್ ಮಾಡುತ್ತಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !