ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದ ಕಾರ್ಕಳ ಪುರಸಭೆ ಸದಸ್ಯನ ಬಂಧನ

ಕಾರ್ಕಳ : ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದ ಪುರಸಭೆ ಸದಸ್ಯನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಕೂಲಿ ಕಾರ್ಮಿಕನೊಬ್ಬನಿಗೆ ಕ್ಷುಲ್ಲಕ ಕಾರಣಕ್ಕೆ ಕಾರ್ಕಳ ಬಂಡೀಮಠದಲ್ಲಿ ಪುರಸಭೆ ಸದಸ್ಯ ಹಲ್ಲೆ ನಡೆಸಿದ್ದ.

ಹಲ್ಲೆಗೊಳಗಾದವರನ್ನು ನಿಟ್ಟೆ ಗ್ರಾಮದ ಬೊರ್ಗಲ್‌ಗುಡ್ಡೆ ಮಹಾಬಲ ಮೂಲ್ಯ(55) ಎಂದು ಗುರುತಿಸಲಾಗಿದೆ. ಹಲ್ಲೆ ನಡೆಸಿದ ಆರೋಪಿ ಕಾರ್ಕಳ ಪುರಸಭೆ ಸದಸ್ಯ ಸೀತಾರಾಮ(60) ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ

ಬಂಡೀಮಠದ ನಂದಿನಿ ಮಿಲ್ಕ್ ಪಾರ್ಲರ್‌ನ ಬಳಿ ಕುಳಿತಿದ್ದ ಮಹಾಬಲ ಮೂಲ್ಯ‌ಗೆ ಆರೋಪಿ ಸೀತಾರಾಮ ಅವಾಚ್ಯ ಶಬ್ದಗಳಿಂದ ನಿಂದಿಸಿ ಮರದ ದೊಣ್ಣೆಯಿಂದ ಕಾಲಿಗೆ ಬಲವಾಗಿ ಹೊಡೆದಿದ್ದಾನೆ. ಇದರ ಪರಿಣಾಮ ಮೂಲ್ಯ ಅವರ ಬಲಗಾಲಿನ ಮೂಳೆ ಮುರಿತವಾಗಿದೆ ಎಂದು ದೂರಲಾಗಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಬೀದಿ ನಾಯಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ : ಡಾ.ವಿದ್ಯಾಕುಮಾರಿ

ವೈದ್ಯ ವಿದ್ಯಾರ್ಥಿಗೆ ಯುಕೆಯಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ವಂಚನೆ – ಮೂವರ ಬಂಧನ

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ