ಕಾಪು ಪುರಸಭೆ ಬಿಜೆಪಿ ತೆಕ್ಕೆಗೆ

ಕಾಪು : ಕಾಪು ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳೆರಡೂ ಕೊನೆಯ ಹಂತದಲ್ಲಿ ಬಿಜೆಪಿ ಪಾಲಾಗಿದೆ. 23 ಮಂದಿ ಸದಸ್ಯ ಬಲದ ಕಾಪು ಪುರಸಭೆಯ ಅಧ್ಯಕ್ಷ ಹುದ್ದೆಯು ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಹುದ್ದೆಯು ಪರಿಶಿಷ್ಟ ಜಾತಿಗೆ ಮೀಸಲಾತಿ ಪ್ರಕಟವಾಗಿತ್ತು.

ಬಿಜೆಪಿ -12, ಕಾಂಗ್ರೆಸ್ -7, ಎಸ್‌ಡಿಪಿಐ -3, ಜೆಡಿಎಸ್ -1 ಸದಸ್ಯ ಬಲವನ್ನು ಹೊಂದಿದ್ದು, ಶಾಸಕ, ಸಂಸದ ಮತ್ತು ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ ಬಿಜೆಪಿ 16 ಮತಗಳನ್ನು ಹೊಂದಿತ್ತು.

ಅಧ್ಯಕ್ಷ ಹುದ್ದೆಗೆ ಬಿಜೆಪಿಯೊಳಗೆ ನಾಲ್ಕು ಮಂದಿಗೆ ಆಕಾಂಕ್ಷಿಗಳಿದ್ದರು. ಅಂತಿಮವಾಗಿ ಹರಿಣಾಕ್ಷಿ ದೇವಾಡಿಗ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದು, ಉಪಾಧ್ಯಕ್ಷ ಹುದ್ದೆಗೆ ಎಸ್.ಡಿ.ಪಿ.ಐ ನಿಂದ ಬಿಜೆಪಿಗೆ ಪಕ್ಷಾಂತರಗೊಂಡ ಸರಿತಾ ಶಿವಾನಂದ್ ಸ್ಪರ್ಧಿಸಿದ್ದರು.‌

ಅಂತಿಮವಾಗಿ ಅಧ್ಯಕ್ಷರಾಗಿ ಹರಿಣಾಕ್ಷಿ ದೇವಾಡಿಗ ಮತ್ತು ಉಪಾಧ್ಯಕ್ಷರಾಗಿ ಸರಿತಾ ಶಿವಾನಂದ್ ಅವರು 16 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಶೋಭಾ ಎ. ಬಂಗೇರ ಮತ್ತು ಸತೀಶ್ಚಂದ್ರ ಮೂಳೂರು ತಲಾ 9 ಮತ ಗಳಿಸಿದ್ದಾರೆ.‌

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ