ಕಾಂತಾರ ಸ್ಟಾರ್ ರಿಷಭ್ ಶೆಟ್ಟಿ ಕಾಂಡ್ಲಾವನದಲ್ಲಿ ಕುಟುಂಬದ ಜೊತೆ ವಿಹಾರ…. ಕಾಂತಾರ ಪ್ರೀಕ್ವೆಲ್‌ನಲ್ಲಿ ಬ್ಯುಸಿಯಾಗಿರುವ ನಟ….

ಕುಂದಾಪುರ : ಕಾಂತಾರ ಖ್ಯಾತಿಯ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಕುಟುಂಬ ಸಮೇತ ರಿಲ್ಯಾಕ್ಸ್ ಮೂಡ್‌ನಲ್ಲಿರುವ ಫೊಟೊ, ವಿಡಿಯೋ ವೈರಲ್ ಆಗುತ್ತಿದೆ. ಅವರು ಕುಟುಂಬ ಸದಸ್ಯರ ಜೊತೆ ಸಾಲಿಗ್ರಾಮದ ಕಯಾಕಿಂಗ್ ಪಾಯಿಂಟ್‌ಗೆ ಭೇಟಿ ನೀಡಿ ಎಂಜಾಯ್ ಮಾಡಿದ್ದಾರೆ.

ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಯಾಕಿಂಗ್ ಪಾಯಿಂಟ್ ಬಹಳ ಪ್ರಸಿದ್ಧಿ ಪಡೆದಿದೆ. ಕಯಾಕಿಂಗ್ ಸೆಂಟರ್‌ನಲ್ಲಿ ಕಯಾಕಿಂಗ್ ಮಾಡುತ್ತಾ, ಕಾಂಡ್ಲಾವನದಲ್ಲಿ ವಿಹಾರ ನಡೆಸಿದರು. ಪತ್ನಿ ಪ್ರಗತಿ, ಮಗ, ಮಗಳು ಮತ್ತು ಅತ್ತೆಯ ಜೊತೆಗೆ ಕಯಾಕಿಂಗ್ ನಡೆಸಿದ ನಟ, ಕೆಲಹೊತ್ತು ಇಲ್ಲಿ ಕಾಲ ಕಳೆದರು.

ಅಂದಹಾಗೆ ಅವರು ಕಾಂತಾರ ಪ್ರಿಕ್ವೇಲ್ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ಬ್ಯುಸಿ ಶೆಡ್ಯೂಲ್ ಮಧ್ಯದಲ್ಲೇ ಕುಟುಂಬದ ಜೊತೆ ವಿಹಾರ ಮಾಡಿ ಗಮನ ಸೆಳೆದಿದ್ದಾರೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ