“ಕಲಾಂತರಂಗ 2023-24” ಬಿಡುಗಡೆ

ಯಕ್ಷಗಾನ ಕಲಾರಂಗದ ಒಂದು ವರ್ಷದ ಸಮಗ್ರ ಚಟುವಟಿಕೆಯ ವಿವರಗಳನ್ನು ಒಳಗೊಂಡ ಮುನ್ನೂರು ಪುಟಗಳ ಸಚಿತ್ರ ”ಕಲಾಂತರಂಗ 2023-24″ ವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆಯವರು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ್ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ಸಂಸ್ಥೆ ನಡೆಸುತ್ತಿರುವ ಕಾರ್ಯಾಚರಣೆಗಳ ಬಗ್ಗೆ ವಿಶೇಷವಾಗಿ ಸುವರ್ಣ ವರ್ಷದ ವಿಶಿಷ್ಟ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಉಡುಪಿಗೆ ಬಂದಾಗ ಸಂಸ್ಥೆಯ ನೂತನ ಕಟ್ಟಡ ಐ.ವೈ.ಸಿ.ಗೆ ಭೇಟಿ ನೀಡುವುದಾಗಿ ಹೆಗಡೆಯವರು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರುಗಳಾದ ಪಿ.ಕಿಶನ್ ಹೆಗ್ಡೆ, ವಿ.ಜಿ.ಶೆಟ್ಟಿ, ಸದಸ್ಯರಾದ ಬಿ. ಭುವನಪ್ರಸಾದ್ ಹೆಗ್ಡೆ ಹಾಗೂ ವಿನೋದಾ ಉಪಸ್ಥಿತರಿದ್ದರು.

ಸಂಚಿಕೆಯು ಸಂಸ್ಥೆಯ ಸದಸ್ಯರಾದ ಪೃಥ್ವಿರಾಜ್ ಕವತ್ತಾರ್‌ರವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿದೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ