ಆಟಿಸಂ ಪೀಡಿತ ಮಕ್ಕಳ ಪ್ರತಿಭೆ ಅನಾವರಣಕ್ಕಾಗಿ ಡಿಸೆಂಬರ್ 14ರಂದು “ಕಲಾಸೌರಭ”

ಉಡುಪಿ : “ಆಟಿಸಂ ಸೊಸೈಟಿ ಆಫ್ ಉಡುಪಿ” ಸಂಸ್ಥೆಯು ಆಟಿಸಂ ಪೀಡಿತ ಮಕ್ಕಳು, ಪೋಷಕರು, ಶಿಕ್ಷಕರು, ದಾದಿಯರು ಮತ್ತು ವೈದ್ಯಕೀಯ ವೃತ್ತಿಪರರಲ್ಲಿ ಆಟಿಸಂ ಕುರಿತ ಜಾಗೃತಿಯನ್ನುಂಟುಮಾಡುವ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಎರಡು ವರ್ಷಗಳಿಂದ ಆಟಿಸಂ ಮಕ್ಕಳು ಮತ್ತು ಪೋಷಕರಿಗಾಗಿ ‘ಕಲಾಸೌರಭ’ ಕಾರ್ಯಕ್ರಮವನ್ನು ಉಡುಪಿ ಆಟಿಸಂ ಸೊಸೈಟಿ ಮತ್ತು ಇನ್ನಿತರ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದಿಂದ ಆಯೋಜಿಸಿತ್ತಿದ್ದೇವೆ. ಈ ವರ್ಷ “ಕಲಾಸೌರಭ-3” ಕಾರ್ಯಕ್ರಮವು “ಸಂಬಂಧ” ಎಂಬ ವಿಷಯವನ್ನು ಆಧರಿಸಿ ಡಿಸೆಂಬರ್ 14 ರಂದು ನಡೆಯಲಿದೆ. ಉಡುಪಿಯ ನಾರಾಯಣಗುರು ಸಭಾಭವನದಲ್ಲಿ ಬೆಳಿಗ್ಗೆ 9 ರಿಂದ 4.30 ರವರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಉಡುಪಿ ಆಟಿಸಂ ಸೊಸೈಟಿ ಮುಖ್ಯಸ್ಥೆ ಅಮಿತಾ ಪೈ ಮಾಹಿತಿ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಆಟಿಸಂ ಪೀಡಿತ ಮಕ್ಕಳ ಸೃಜನಶೀಲತೆ ಮತ್ತು ಅವರಲ್ಲಿನ ಪ್ರತಿಭೆಗಳನ್ನು ಅನಾವರಣಗೊಳಿಸುವುದು ಹಾಗೂ ಪೋಷಕರನ್ನು ಉತ್ತೇಜಿಸಲು ಅವರಿಗೂ ವೇದಿಕೆಯನ್ನು ಕಲ್ಪಿಸಿಕೊಡಲಾಗಿದೆ. ಈ ಮೂಲಕ ಪೊಷಕರಲ್ಲಿ ಸಾಮಾಜಿಕ ಕಳಂಕವನ್ನು ಹೊಂದದೆ ತಮ್ಮ ವಿಶೇಷ ಮಗುವಿನೊಂದಿಗೆ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಮಾಡುವುದು ಈ ಬಾರಿಯ ಉದ್ದೇಶವಾಗಿದೆ. ಈ ಬಾರಿಯ ‘ಕಲಾಸೌರಭ-3’ ಸಹ ಆಯೋಜಕರಾಗಿ ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ, ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ, ಒನ್ ಗುಡ್ ಸ್ಟೆಪ್ ಬೆಂಗಳೂರು, ಹಾಗೂ ಹರ್ಷ-ಉಡುಪಿ, ಆಭರಣ ಉಡುಪಿ, ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ, ಉಡುಪಿ ಮತ್ತು ಎಂಆರ್‌ಜಿ ಗ್ರೂಪ್ ಸಹಕಾರ ನೀಡಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

Related posts

ಬ್ರಹ್ಮಾವರದ ಸರಕಾರಿ ಪದವಿ ಪೂರ್ವ ಕಾಲೇಜು “ಹೆಗ್ಗುಂಜೆ ರಾಜೀವ ಶೆಟ್ಟಿ ಕರ್ನಾಟಕ ಪಬ್ಲಿಕ್ ಸ್ಕೂಲ್” ಆಗಿ ನಾಮಕರಣ

ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ನೂತನ ಅಧ್ಯಕ್ಷರಾಗಿ ಫ್ರ್ಯಾಂಕೀ ಡಿಸೋಜಾ ಕೊಳಲಗಿರಿ ಆಯ್ಕೆ; ಗೌರವಾಧ್ಯಕ್ಷರಾಗಿ ಕೃಷ್ಣಕುಮಾರ್ ಆಯ್ಕೆ

ಸುಮೊಟೋ ಕೇಸ್ : ಹಿಂದೂ ಮುಖಂಡರಿಗೆ ಜಾಮೀನು ಮಂಜೂರು