ಕಡಿಯಾಳಿ ಕಮಲಾಬಾಯಿ ಹೈಸ್ಕೂಲ್ ರೋಟರಿ ಇಂಟರಾಕ್ಟ್ ಪದಗ್ರಹಣ

ಉಡುಪಿ : ರೋಟರಿ ಉಡುಪಿ ಪ್ರಾಯೋಜಿತ ಕಡಿಯಾಳಿ ಕಮಲಾಬಾಯಿ ಹೈಸ್ಕೂಲ್ ಇಂಟರಾಕ್ಟ್ ಕ್ಲಬ್‌ನ ಪದಗ್ರಹಣ ಸಮಾರಂಭವು ಯು. ಕಮಲಾಬಾಯಿ ಹೈಸ್ಕೂಲ್, ಕಡಿಯಾಳಿಯಲ್ಲಿ ನೆರವೇರಿತು.

ರೋಟರಿ ಉಡುಪಿ ಅಧ್ಯಕ್ಷ ರೋ. ಗುರುರಾಜ ಭಟ್‌ರವರು ಇಂಟರಾಕ್ಟ್ ಅಧ್ಯಕ್ಷ ಪ್ರಣವ್ ಮತ್ತು ಕಾರ್ಯದರ್ಶಿ ಪವಿತ್ರ ಅವರಿಗೆ ಪದಪ್ರಧಾನ ನೆರೆವೇರಿಸಿ ಶುಭಹಾರೈಸಿದರು.

ಗತ ವರ್ಷದ ಅಧ್ಯಕ್ಷೆ ಚೈತ್ರ ಎಲ್ಲರನ್ನೂ ಸ್ವಾಗತಿಸಿದರು. ಇಂಟರಾಕ್ಟ್ ಸಭಾಪತಿ ರೋ. ಸಾಧನಾ ಮುಂಡ್ಕೂರ ಶುಭ ಹಾರೈಸಿದರು. ಮಾಜಿ ಅಸಿಸ್ಟೆಂಟ್ ಗವರ್ನರ್ ರೋ ಡಾ. ಗಣೇಶ್ ಅವರು ಜಲಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾದ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸುದರ್ಶನ್ ನಾಯಕ್, ಶಿಕ್ಷಕ ಸಂಯೋಜಕರಾದ ಶ್ರೀ ಜಗದೀಶ್, ರೋಟರಿ ಉಡುಪಿಯ ರೋ. ರಾಮಚಂದ್ರ ಉಪಾಧ್ಯಾಯ, ಕಾರ್ಯದರ್ಶಿ ರೋ.ವೈಷ್ಣವಿ ಆಚಾರ್ಯ, ರೋ. ಶುಭಲಕ್ಷ್ಮಿ ಭಟ್ ಉಪಸ್ಥಿತರಿದ್ದರು.

ಇಂಟರಾಕ್ಟರ್ ರಂಜನ್ ಧನ್ಯವಾದ ಸಮರ್ಪಿಸಿದರು. ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !