ಕೆ. ಎಂ ಖಲೀಲ್‌ರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಾರ್ಕಳ : ಕಾರ್ಕಳದ ಕೆ ಎಂ ಖಲೀಲ್‌ರಿಗೆ ಕನ್ನಡ ಸುದ್ದಿ ವಾಹಿನಿಯು ಮಾಧ್ಯಮ ರತ್ನ ಪ್ರಶಸ್ತಿ ನೀಡಲಿದೆ. ಸುಮಾರು 20 ವರ್ಷಗಳಿಂದ ಮಂಗಳೂರಿನ ಪ್ರತಿಷ್ಠಿತ ಸುದ್ದಿ ವಾಹಿನಿಯಾದ V4 ಮಾಧ್ಯಮದಲ್ಲಿ ತಾಲೂಕು ವರದಿಗಾರನಾಗಿ ಸೇವೆ ಸಲ್ಲಿಸುತ್ತಿರುವ ಇವರು, ವೃತ್ತಿಯಲ್ಲಿ ಛಾಯಾಗ್ರಾಹಕನಾಗಿ 40ವರ್ಷದಿಂದ ದುಡಿಯುತ್ತಿದ್ದು, ಹಾಗೂ ಶಿಕ್ಷಣಕ್ಕೆ ಒತ್ತುಕೊಡುವ ಸಂಸ್ಥೆಯಾದ ಜಮಯ ತುಲ್ ಫಲ ಹ ಕಾರ್ಕಳ ಘಟಕದಲ್ಲಿ ಪತ್ರಿಕಾ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ದಿನಾಂಕ, 24.11.2021 ರಲ್ಲಿ ಗ್ರಾಮ ಸಾಹಿತ್ಯ ಸಮ್ಮೇಳನ‌ದಲ್ಲಿ ಆದಿ ಗ್ರಾಮೋತ್ಸವ ಯುವ ಸಿರಿ ಪ್ರಶಸ್ತಿ, 25.06.2022 ರಲ್ಲಿ ಕರ್ನಾಟಕ ಸಾಧನ ರತ್ನ ಪ್ರಶಸ್ತಿ, ಹಾಗೂ 23.7.2023‌ರಂದು ಬೆಂಗಳೂರಿನಲ್ಲಿ ಜರುಗಿದ ಸಮಾರಂಭದಲ್ಲಿ ಕರುನಾಡ ರತ್ನ ಪ್ರಶಸ್ತಿ ಪಡೆದಿದ್ದಾರೆ.

ಇದೇ ಬರುವ ಭಾನುವಾರ 27.4.25‌ರಂದು ಜರಗುವ ಹೈಬ್ರಿಡ್ ನ್ಯೂಸ್ ಕನ್ನಡ ಸುದ್ದಿ ವಾಹಿನಿ ಕೊಪ್ಪಳದಲ್ಲಿ ಇವರ ವತಿಯಿಂದ ನೀಡಲ್ಪಡುವ ಕರುನಾಡು ಸಂಭ್ರಮ ಸಮಾರಂಭದಲ್ಲಿ ಮಾಧ್ಯಮ ರತ್ನ ಪ್ರಶಸ್ತಿಯನ್ನು ಪಡೆಯಲು ಆಯ್ಕೆಯಾಗಿರುತ್ತಾರೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ