ಸುಳ್ಯದ ಪೋಲೀಸ್ ಠಾಣೆಯಲ್ಲಿ ನ್ಯಾಯ ಸಿಗುತ್ತಿಲ್ಲ; ಸುಳ್ಯದ ಕಲ್ಕುಡ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ವಿಶ್ವ ಹಿಂದೂ ಪರಿಷತ್ ಭಜರಂಗದಳದ ಕಾರ್ಯಕರ್ತರು

ಸುಳ್ಯ : ಪೋಲೀಸ್ ಠಾಣೆಗೆ ನಮ್ಮ ಸಂಘಟನೆಯ ವತಿಯಿಂದ ನೀಡಿದ ದೂರುಗಳಿಗೆ, ನಾವು ನೀಡಿದ ಮಾಹಿತಿಗಳಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ. ಇನ್ನು ನಾವು ಪೋಲೀಸರಿಗೆ ಮಾಹಿತಿ, ದೂರು ನೀಡುವುದಿಲ್ಲ. ದೈವವೇ ನಮಗೆ‌ ನ್ಯಾಯ ಕೊಡಿಸಬೇಕು ಎಂದು ವಿಶ್ವ ಹಿಂದೂ ಪರಿಷತ್, ಭಜರಂಗದಳ ಸುಳ್ಯ ಪ್ರಖಂಡದ ಕಾರ್ಯಕರ್ತರು ಸುಳ್ಯ ಕಲ್ಕುಡ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಜೂ.19 ರಂದು ಬೆಳಗ್ಗೆ ಸುಳ್ಯದ ಕಲ್ಕುಡ ದೈವಸ್ಥಾನಕ್ಕೆ ಬಂದ ವಿಶ್ವ ಹಿಂದೂ ಪರಿಷತ್ ಭಜರಂಗದಳ ಕಾರ್ಯಕರ್ತರಾದ ಉಪೇಂದ್ರ ನಾಯಕ್, ವರ್ಷಿತ್ ಚೊಕ್ಕಾಡಿ, ದೇವಿಪ್ರಸಾದ್ ಅತ್ಯಾಡಿ, ನವೀನ್ ಎಲಿಮಲೆ, ಪ್ರಕಾಶ ಯಾದವ್, ಅರವಿಂದ ಮೊದಲಾದ 20‌ಕ್ಕೂ ಅಧಿಕ ಮಂದಿ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದರು.

ಹಿಂದೂ ಸಂಘಟನೆಯವರಾದ ನಾವು ನಮಗೆ ಬಂದ ಮಾಹಿತಿಯನ್ನು ಪೋಲೀಸ್ ಠಾಣೆಗೆ ನೀಡುತಿದ್ದೇವೆ. ಆದರೆ ಪೋಲೀಸರು ಅದನ್ನು ಬಿಟ್ಟು ಬಿಡುತಿದ್ದಾರೆ. ಮೊನ್ನೆ ಗಾಂಧಿನಗರದ ಮೊಬೈಲ್ ಅಂಗಡಿಯಲ್ಲಿ ನಡೆದ ಘಟನೆಯನ್ನು ನಾವೇ ಮಾಹಿತಿ ನೀಡಿದ್ದು, ಬಳಿಕ ಅದು ಏನಾಯಿಂದು ನಮಗೆ ಮಾಹಿತಿ ನೀಡಿಲ್ಲ.

ನಿನ್ನೆಯೂ ಜೋಡಿಯೊಂದು ಅನುಮಾನಾಸ್ಪದವಾಗಿ ಕಾರಿನಲ್ಲಿ ಹೋಗುತ್ತಿರುವಾಗ ಮಾಹಿತಿ ನೀಡಿದ್ದು ನಮ್ಮ ಸಂಘಟನೆ. ಅವರನ್ನು ಕೂಡ ಬಿಟ್ಟು ಕಳಿಸಿದ್ದಾರೆ. ಏನಾಯಿತೆಂಬ ಮಾಹಿತಿಯೂ ನಮಗಿಲ್ಲ. ನಮ್ಮ ಮೇಲೆಯೇ ಕೆಲವು ಕೇಸು ಹಾಕಿದ್ದೂ ಇದೆ. ಆದ್ದರಿಂದ ನಾವು ನೀಡಿದ ಮಾಹಿತಿಗೆ ನ್ಯಾಯ ಸಿಗುತ್ತಿಲ್ಲ. ಆದ್ದರಿಂದ ನಮಗೆ ದೈವವೇ ನ್ಯಾಯ ಕೊಡಬೇಕೆಂದು ಕಾರ್ಯಕರ್ತರು ಪ್ರಾರ್ಥನೆ ‌ಮಾಡಿದರು.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ