ಅಷ್ಠಮಿಗೆ ಇನ್ನು ಒಂದೇ ದಿನ-ಕೃಷ್ಣನಗರಿಯಲ್ಲೀಗ ಉತ್ಸವದ ಕಳೆ

ಉಡುಪಿ : ಕೃಷ್ಣನೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಗರಿಗೆದರಿದೆ. ಈಗಾಗಲೇ ಶ್ರೀ ಕೃಷ್ಣಮಠದಲ್ಲಿ ಕಣ್ಮನ ಸೆಳೆಯುವ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಆಗಸ್ಟ್ 26ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದುಕೃಷ್ಣ ಸ್ಪರ್ಧೆಗಳು, ವಿವಿಧ ಧಾರ್ಮಿಕ ಕಾರ್ಯಕ್ರಮ, ವಿಶೇಷ ಪೂಜೆ, ರಾತ್ರಿ ಅರ್ಘ್ಯಪ್ರದಾನ ನೆರವೇರಲಿವೆ. ರಥಬೀದಿಯಲ್ಲಿ ಆಗಸ್ಟ್ 27ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದೆ.

ಕೃಷ್ಣ ಪ್ರಸಾದಕ್ಕೆ ಅಗತ್ಯ ಇರುವ ಉಂಡೆ, ಚಕ್ಕುಲಿ ತಯಾರಿಸಲಾಗುತ್ತಿದೆ. ನಗರದಾದ್ಯಂತ ಹುಲಿವೇಷ, ವಿವಿಧ ವೇಷಗಳ ರಂಗು ಕಣ್ತುಂಬಿಕೊಳ್ಳಬಹುದು. ಈ ನಡುವೆ ಮಹಿಳಾ ಹುಲಿವೇಷಧಾರಿಗಳ ತಂಡವು ವಿಶೇಷವಾಗಿ ಗಮನ ಸೆಳೆಯುತ್ತಿದೆ.
ಅಷ್ಟಮಿಗೂ ಹುಲಿವೇಷಕ್ಕೂ ಬಿಡಿಸಲಾರದ ನಂಟು. ಉಡುಪಿಯ ಅಷ್ಟಮಿ ಸಂಭ್ರಮ ಎಂದರೆ ಹುಲಿವೇಷ. ಮಾರ್ಪಳ್ಳಿ, ಅಲೆವೂರು, ನಿಟ್ಟೂರು, ಕೊರಂಗ್ರಪಾಡಿ, ಕಡಿಯಾಳಿ, ಮಲ್ಪೆ ಸಹಿತ ಮೊದಲಾದ ಕಡೆಗಳಲ್ಲಿ ಪ್ರಸಿದ್ಧ ಹುಲಿವೇಷ ತಂಡಗಳು ಜನರನ್ನು ರಂಜಿಸಿ, ಸಾಮಾಜಿಕ ಸೇವೆ ಮಾಡುತ್ತಾರೆ. ಇತ್ತೀಚೆಗೆ ಮಹಿಳೆಯರು ಹುಲಿವೇಷ ಹಾಕುತ್ತಿರುವುದು ಕಂಡು ಬರುತ್ತಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ