ಮಳೆಹಾನಿ‌ ಪ್ರದೇಶಕ್ಕೆ ನ್ಯಾಯಾಧೀಶರುಗಳ ಭೇಟಿ, ಅಗತ್ಯ ನೆರವಿಗೆ ಸೂಚನೆ

ಕುಂದಾಪುರ : ಮಳೆಯಿಂದ ಹಾನಿಗೀಡಾದ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಡಾಡಿ ಮತ್ಯಾಡಿ ಗ್ರಾಮದ ಗುಡ್ಡಟ್ಟುವಿಗೆ ಗುರುವಾರ ಹಿರಿಯ ಸಿವಿಲ್ ನ್ಯಾಯಾಧೀಶ, ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ರಾಜು ಎನ್‌. ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶೆ, ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಮಂಜುಳ ಬಿ. ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅತಿ ಮಳೆಯಿಂದ ಹಾನಿಗೊಳಗಾದ ಗುಡ್ಡಟ್ಟುವಿನ ದೇವಿ ಸೀತಾರಾಮ ಆಚಾರ್, ನಾಗರಾಜ್, ಬಾಬು ರಾಯ್, ತಾರಾ ಆಚಾ‌ರ್ ಅವರ ಮನೆಗಳಿಗೆ ಭೇಟಿ ನೀಡಿ ಊಟೋಪಚಾರದ ವ್ಯವಸ್ಥೆಗೆ ಸೂಚಿಸಿ, ರಾತ್ರಿ ಪಂಚಾಯತ್ ನೀಡುವ ವಸತಿ ವ್ಯವಸ್ಥೆಗೆ ತೆರಳುವಂತೆ, ನೆರೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿಕೊಡುವಂತೆ ನ್ಯಾಯಾಧೀಶರು ಸೂಚಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಶೋಭಾಲಕ್ಷ್ಮೀ, ಉಪತಹಶೀಲ್ದಾ‌ರ್ ವಿನಯ್, ವಕೀಲರ ಸಂಘದ ಅಧ್ಯಕ್ಷ ಹಂದಟ್ಟು ಪ್ರಮೋದ್ ಹಂದೆ ಮತ್ತಿತರರು ಇದ್ದರು.

Related posts

ಮಣ್ಣಪಳ್ಳ ಕೆರೆ ಸಮಗ್ರ ಅಭಿವೃದ್ಧಿ ಹಾಗೂ ನಿರ್ವಹಣೆ ನಗರಸಭೆಗೆ ಹಸ್ತಾಂತರಿಸಿ : ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹ

ವೈದ್ಯಕೀಯ ಶಿಕ್ಷಣದಲ್ಲಿ ಆಧುನಿಕ VR-ಆಧಾರಿತ ಕೌಶಲ ತರಬೇತಿಗೆ ಮೆಡಿಸಿಮ್ ವಿಆರ್‌ನೊಂದಿಗೆ ಮಾಹೆ ಒಪ್ಪಂದ

ಇಡಿ, ಐಟಿ, ಸಿಬಿಐ ದುರುಪಯೋಗ ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ