ಎಂಆರ್‌ಪಿಎಲ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ; ಪ್ರಕರಣ ದಾಖಲು

ಕಾರ್ಕಳ : ಎಂಆರ್‌ಪಿಎಲ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಲ್ಲಡ್ಕ ಗ್ರಾಮದ ಸುಚಿತ್ (29) ಉದ್ಯೋಗ ಹುಡುಕುತ್ತಿದ್ದು, ಅವಿನಾಶ್ ಎಂಬಾತ ತನ್ನ ಮಂಗಳೂರು ಕದ್ರಿಯಲ್ಲಿರುವ ಸನ್ನಿಧಿ ಇಂಟಿರಿಯರ್ ಡಿಸೈನ್‌ನಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ ಸುಚಿತ್ ಗೆಳತಿಯ ಮೂಲಕ ಮಂಗಳೂರು ಎಂಆರ್‌ಪಿಎಲ್‌‌ನಲ್ಲಿ ಕೆಲಸಕ್ಕೆ ಜನ ಬೇಕಾಗಿದ್ದಾರೆ ಎಂದು ಹೇಳಿಸಿದ್ದನು.

ಈ ಬಗ್ಗೆ ಅವಿನಾಶ್‌ನೊಂದಿಗೆ ಸುಚಿತ್ ಮಾತನಾಡಿದ್ದು, ಆಗ ಅವಿನಾಶ್ 1,05,600ರೂ. ಹಣ ಕೊಡಬೇಕು ಎಂದು ತಿಳಿಸಿದ್ದನು ಮತ್ತು ಡಿ.13ರಂದು ಕೆಲಸ ಕೊಡಿಸುವುದಾಗಿ ನಂಬಿಸಿದ್ದನು. ಅದರಂತೆ ಸುಚಿತ್ ನ.18ರಿಂದ ಡಿ.26ರವರೆಗೆ ಆನ್‌ಲೈನ್ ಮೂಲಕ ಮತ್ತು 20,000ರೂ. ಹಣವನ್ನು ನಗದಾಗಿ ಅವಿನಾಶ್‌ಗೆ ಪಾವತಿಸಿದ್ದನು. ಆದರೆ ಅವಿನಾಶ್ ಮಂಗಳೂರು ಎಂಆರ್‌ಪಿಎಲ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 1,05,600ರೂ. ಪಡೆದುಕೊಂಡು ಕೆಲಸವನ್ನು ಕೊಡಿಸದೇ ಮೋಸ ಮಾಡಿರುವುದಾಗಿ ದೂರಲಾಗಿದೆ.

ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಮರದ ದಿಮ್ಮಿಗೆ ಮೀನುಗಾರಿಕಾ ಬೋಟ್ ಡಿಕ್ಕಿ : ಅಪಾರ ಹಾನಿ

ಮೆಸ್ಕಾಂ ಎಟಿಪಿ ಬಿಲ್ ಪಾವತಿ ಸೇವೆ ಪುನರಾರಂಭಿಸಿ : ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹ

ಸಿಬಿಐ ಅಧಿಕಾರಿ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ