ಅನುಮತಿ ಇಲ್ಲದೆ ಜಾಥಾ – ಎಸ್‌ಡಿಪಿಐ ನಾಯಕರ ವಿರುದ್ಧ ಮತ್ತೆ ಕೇಸ್!

ಪಡುಬಿದ್ರಿ : ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಎಸ್‌ಡಿಪಿಐ ನಾಯಕ ರಿಯಾಜ್‌ ಕಡುಂಬು ಹಾಗೂ ಮತ್ತಿತರರು ಅನುಮತಿ ಇಲ್ಲದೆ ಜಾಥಾ ನಡೆಸಿರುವ ಕಾರಣಕ್ಕೆ ಅವರ ವಿರುದ್ಧ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

“ಯೂಟರ್ನ್ ರಾಜ್ಯ ಸರಕಾರದ ವಿರುದ್ಧ ಸಾಮಾಜಿಕ ನ್ಯಾಯಕ್ಕಾಗಿ ಚಲೋ ಬೆಳಗಾವಿ ಅಂಬೇಡ್ಕರ್‌ ಜಾಥಾ – 2″ ಎಂಬ ಜಾಥಾವನ್ನು ಎಸ್‌ಡಿಪಿಐ ಡಿಸೆಂಬರ್ 10ಕ್ಕೆ ಆಯೋಜಿಸಿತ್ತು.

ಈ ಕುರಿತಾದ ಅನುಮತಿಯನ್ನು ಪಡೆಯಲಾಗಿದೆಯೇ ಎಂದು ಹೆಜಮಾಡಿಗೆ ಆಗಮಿಸಿದ್ದ ಜಾಥಾದ ನಾಯಕ ರಿಯಾಜ್‌ ಕಡುಂಬು ಅವರಲ್ಲಿ ಠಾಣೆಯ ಪಿಎಸ್‌ಐ ಪ್ರಸನ್ನ ಪ್ರಶ್ನಿಸಿದ್ದರು. ಆಗ ಅನುಮತಿ ಪಡೆದಿಲ್ಲ ಎನ್ನುವುದನ್ನು ಎಸ್‌ಡಿಪಿಐ ನಾಯಕರು ಪೊಲೀಸರಿಗೆ ತಿಳಿಸಿದ್ದರು.
ಅನುಮತಿ ಇಲ್ಲದ ಜಾಥಾದಲ್ಲಿ ಕಾರು ಬೈಕ್‌ಗಳಲ್ಲಿನ 75 ರಿಂದ 100 ಜನರ ಅಕ್ರಮ ಗುಂಪು ಹೆದ್ದಾರಿ ವಾಹನ ಸಂಚಾರಕ್ಕೆ ಅಡೆತಡೆ ಉಂಟು ಮಾಡಲಿದೆ. ಇದು ಸರಿಯಲ್ಲ ಎಂದು ಪ್ರಸನ್ನ ಅವರು ವಿವರಿಸಿದ್ದರು.

ಆದರೂ ಅದಕ್ಕೆ ಕಿವಿಗೊಡದೆ ಘೋಷಣೆ ಕೂಗುತ್ತಾ ಮೂಲ್ಕಿಯತ್ತ ಜಾಥಾವನ್ನು ಮುಂದುವರಿಸಲಾಗಿತ್ತು. ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ