ಸಂಘಸoಸ್ಥೆಗಳಿಗೆ 60 ತುಂಬುತ್ತಿರುವುದೇ ಒಂದು ಮಹಾ ಸಾಧನೆ : ಬ್ರಹ್ಮಾವರ ಅಜಪುರ ಕರ್ನಾಟಕ ಸಂಘದ 69ನೇ ವರ್ಷದ ನಾಡಹಬ್ಬ, ಸನ್ಮಾನ ಸಂದರ್ಭದಲ್ಲಿ ಡಾ. ತಲ್ಲೂರು

ಉಡುಪಿ : ಸಂಘ ಸಂಸ್ಥೆಗಳಿಗೆ 60 ವರ್ಷ ತುಂಬುತ್ತಿರುವುದು ಒಂದು ಮಹಾ ಸಾಧನೆಯೇ ಆಗಿದೆ, ಈ ನಿಟ್ಟಿನಲ್ಲಿ ಬ್ರಹ್ಮಾವರದ ಅಜಪುರ ಕರ್ನಾಟಕ ಸಂಘಕ್ಕೆ 69 ವರ್ಷ ತುಂಬುತ್ತಿರುವುದು ಹಾಗೂ ಅದಕ್ಕೆ ಕಾರಣೀಭೂತರಾದ ಸಂಸ್ಥೆಯ ಸರ್ವರೂ ಅಭಿನಂದನಾರ್ಹರು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಬ್ರಹ್ಮಾವರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಜಪುರ ಕರ್ನಾಟಕ ಸಂಘದ 69ನೇ ವರ್ಷದ ನಾಡಹಬ್ಬದಲ್ಲಿ ಭಾಗವಹಿಸಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷನಾಗಿ ಯಕ್ಷಗಾನಕ್ಕೆ ಕೊಡುಗೆ ನೀಡುತ್ತಿರುವ ಸಂಘಸoಸ್ಥೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಕಾರ್ಯ ಮಾಡುತ್ತಿದ್ದೇನೆ. ಪ್ರಮುಖವಾಗಿ ಮಕ್ಕಳಿಗೆ ಯಕ್ಷಗಾನವನ್ನು ಕಲಿಸುವ ಸಂಘಸoಸ್ಥೆಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು. ಈ ಮೂಲಕ ಯಕ್ಷಗಾನ ಕಲೆಯ ಉಳಿವು ಬೆಳವಣಿಗೆ ನಿರಾಂತಕವಾಗಿ ನಡೆಯಬೇಕೇನ್ನುವುದೇ ಅಕಾಡೆಮಿಯ ಹೆಬ್ಬಯಕೆ ಎಂದು ಅವರು ವಿವರಿಸಿದರು.

ಅಜಪುರ ಕರ್ನಾಟಕ ಸಂಘದ ಅಧ್ಯಕ್ಷ ಎಚ್.ನಿತ್ಯಾನಂದ ಶೆಟ್ಟಿ ಅವರು ಮಾತನಾಡಿ, ಅಜಪುರ ಕರ್ನಾಟಕ ಸಂಘವನ್ನು ಬೆಳೆಸುವಲ್ಲಿ ಶ್ರಮಿಸಿದ ಹಂದೆ, ಸುಬ್ಬಣ್ಣ ಭಟ್, ಬಿ.ವಿ.ಆಚಾರ್ಯ ಮೊದಲಾದವರ ದೂರದೃಷ್ಟಿತ್ವದ ಫಲವೇ ಸಂಘ 69 ವರ್ಷಗಳಿಗೆ ಪಾದಾರ್ಪಣೆ ಮಾಡುವಂತಾಗಿದೆ. ಸಾತ್ವಿಕ ಮನೋಭಾವವನ್ನು ಬೆಳೆಸಿಕೊಂಡು ಧನಾತ್ಮಕ ಚಿಂತನೆ ಬೆಳೆಸಿಕೊಂಡು ಈ ಸಂಘವನ್ನು ಹುಟ್ಟುಹಾಕಿದ್ದಾರೆ. ಮಾನವ ಉನ್ನತ ಆದರ್ಶಗಳನ್ನು ಬೆಳೆಸಿಕೊಂಡು ಬೆಳೆದರೆ ಆತನ ಬದುಕು ಸಾರ್ಥಕವೆನಿಸುತ್ತದೆ ಎಂದರು.

ಉದ್ಯಮಿ ಚೇತನ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ಸಂಘ ಇಷ್ಟೊಂದು ಎತ್ತರಕ್ಕೆ ಬೆಳೆದಿರುವುದಕ್ಕೆ ಕಾರಣರಾದ ಪ್ರತೀ ಸದಸ್ಯರು ಅಭಿನಂದನಾರ್ಹರು. ಈ ಶುಭ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಮಾಡಿರುವುದು ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ 90 ವರ್ಷ ತುಂಬಿದ ಸಮಾಜದ ಹಿರಿಯ ನಾಗರಿಕರನ್ನೂ ಗುರುತಿಸಿ ಅಭಿನಂದಿಸುವ ಕಾರ್ಯ ನಡೆಯಲಿ ಎಂದು ಹಾರೈಸಿದರು.

ಬಿಎಸ್‌ಎನ್‌ಎಲ್‌ನ ನಿವೃತ್ತ ಮಹಾ ಪ್ರಬಂಧಕ ಎಂ.ಚoದ್ರಶೇಖರ ಕಲ್ಕೂರ ಅವರು ಅಜಪುರ ಯಕ್ಷಗಾನ ಸಂಘ ನಡೆದು ಬಂದ ದಾರಿ ಹಾಗೂ ಸಾಧನೆಯನ್ನು ಪ್ರಸ್ತಾಪಿಸಿದರು.

ಕಾರ್ಯಕ್ರಮದಲ್ಲಿ ಖ್ಯಾತ ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಅವರಿಗೆ ಸುವರ್ಣ ನಿಧಿ ಸನ್ಮಾನದೊಂದಿಗೆ ಗೌರವಿಸಲಾಯಿತು. ಕೃಷ್ಣಸ್ವಾಮಿ ಜೋಯಿಸ ಅವರಿಗೆ ಅಜಪುರ ಯಕ್ಷ ಪುರಸ್ಕಾರ ಪ್ರದಾನ ಮಾಡಲಾಯಿತು.

ಸಭಾ ಕಾರ್ಯಕ್ರಮದ ಬಳಿಕ ಜಾಂಬವತಿ ಕಲ್ಯಾಣ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ಸಂಪನ್ನಗೊoಡಿತು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !