ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಈಶ್ವರ್ ಮಲ್ಪೆಗೆ ಸನ್ಮಾನ

ಉಡುಪಿ : ಸಮಾಜ ಸೇವಕ, ನುರಿತ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರನ್ನು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಅವರ ಮನೆಗೇ ತೆರಳಿ ಸನ್ಮಾನಿಸಲಾಯಿತು.

ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಚೈತನ್ಯ ಎಂ.ಜಿ. ಅವರು ಈಶ್ವರ್ ಮಲ್ಪೆ ಸಾಧನೆ, ಸನ್ಮಾನಗಳ ವಿವರವನ್ನೊಳಗೊಂಡ ಅಭಿನಂದನ ಪತ್ರ ವಾಚಿಸಿದರು. ಅಧ್ಯಕ್ಷ ಚಂದ್ರಕಾಂತ ಕೆ.ಎನ್. ಶಾಲು ಹೊದಿಸಿ ಸನ್ಮಾನಿಸಿದರು. ಪೂರ್ವಾದ್ಯಕ್ಷ ಶಶಿಧರ ಭಟ್ ನಿಧಿ ಸಮರ್ಪಿಸಿದರು.

ಸನ್ಮಾನ ಸ್ವೀಕರಿಸಿದ ಈಶ್ವರ್ ಮಲ್ಪೆ ಮಾತನಾಡಿ ಎಲ್ಲರ ಶುಭ ಹಾರೈಕೆ, ಬೆಂಬಲ, ಪ್ರೋತ್ಸಾಹ ಹಾಗೂ ದೇವರ ದಯೆಯಿಂದ ತನಗೆ ಇಂಥ ಪುಣ್ಯಕಾರ್ಯ ಮಾಡಲು ಶಕ್ತಿ ಬಂದಿದೆ.‌ ಅದನ್ನು ಮುನ್ನಡೆಸಿಕೊಂಡು ಹೋಗುವ ಆಶಯ ಇದೆ ಎಂದರು.

ಪೂರ್ವಾದ್ಯಕ್ಷರಾದ ವಿಷ್ಣು ಪಾಡಿಗಾರ್ ಮತ್ತು ಎಂ.ಎಸ್. ವಿಷ್ಣು, ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ ಮೊದಲಾದವರು ಉಪಸ್ಥಿತರಿದ್ದರು.

Related posts

ಮನೆಯ ಮೇಲೆ ಆಲದ ಮರ ಬಿದ್ದು ಮನೆಯೊಳಗಿದ್ದ ದಂಪತಿಗೆ ಗಾಯ- ಮನೆಗೆ ಸಂಪೂರ್ಣ ಹಾನಿ

ಕನಿಷ್ಟ ಕೂಲಿ, ತುಟ್ಟಿಭತ್ಯೆ ಕಡಿತಗೊಳಿಸಿದ ರಾಜ್ಯ ಸರಕಾರದ ಆದೇಶ ವಾಪಸಾತಿಗೆ ಒತ್ತಾಯಿಸಿ ಪ್ರತಿಭಟನೆ

ಕೋಟದಲ್ಲಿ ಬೈಕ್ ಡಿಕ್ಕಿ ಹೊಡೆದು ಪಾದಚಾರಿ ಮೃತ್ಯು