‘ನಾಳೆ ಶಾಲೆಗೆ ರಜೆ ಇದೆಯಾ?’ ಮಾವನಿಗೆ ಕರೆ ಮಾಡಿರುವ ಪುಟ್ಟಮಗುವಿನ ಆಡಿಯೋ ವೈರಲ್

ಮಂಗಳೂರು : ‘ನಾಳೆ ಶಾಲೆಗೆ ರಜೆ ಇದೆಯಾ?’ ಎಂದು ಪುಟ್ಟಮಗುವೊಂದು ತನ್ನ ತೊದಲು ಮಾತಿನಿಂದ ಮಾವನಿಗೆ ಕರೆ ಮಾಡಿರುವ ಆಡಿಯೋವೊಂದು ಭಾರೀ ವೈರಲ್ ಆಗುತ್ತಿದೆ.

ಮಳೆ ಹೆಚ್ಚಾದಲ್ಲಿ, ರೆಡ್ ಅಲರ್ಟ್ ಇರುವ ದಿನ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ರಜೆ ನೀಡುತ್ತಾರೆ. ಆದ್ದರಿಂದ ಮಂಗಳೂರಿನ ಆಕಾಶಭವನದ ಶ್ರೀಯಾ ರೈ ಎಂಬ ಪುಟ್ಟ ಮಗು ತನ್ನ ಮಾವ ಸಂದೇಶ್ ರೈಯವರಿಗೆ ಕರೆ ಮಾಡಿ ತುಳುವಿನಲ್ಲಿ ನಾಳೆ ಶಾಲೆಗೆ ರಜೆ ಇದೆಯೇ ಎಂದು ಕೇಳುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಅಷ್ಟಕ್ಕೂ ಆಡಿಯೋದಲ್ಲಿ ಏನಿದೆ ಎಂದರೆ ಮಗು ನಾಳೆ ಶಾಲೆಗೆ ರಜೆ ಇದೆಯೇ ಎಂದು ಕೇಳುವ ಬದಲು ನಾಳೆ ಡಿಸಿಗೆ ರಜೆ ಇದೆಯೇ ಎಂದು ಕೇಳುವ ಮೂಲಕ ಆಡಿಯೋ ಆರಂಭವಾಗುತ್ತದೆ. 1.30ನಿಮಿಷದಷ್ಟು ಇರುವ ಈ ಮಾವ – ಸೊಸೆಯ ಸಂವಾದ ಸಖತ್ ಫನ್ನಿಯಾಗಿದೆ‌. ಮಗುವಿಗೆ ಡಿಸಿಯವರ ಹೆಸರನ್ನು ಸ್ಪಷ್ಟವಾಗಿ ಹೇಳಲು ಬಾರದೆ ಮುದ್ದುಮುದ್ದಾಗಿ ತೊದಲುವುದು, ಇಂದು ರಾತ್ರಿ ಜೋರು ಮಳೆ ಬಂದ್ರೆ ನಾಳೆ ರಜೆ ಕೊಡುತ್ತಾರಾ ಎಂದು ಶ್ರೀಯಾ ರೈ ಮುಗ್ಧವಾಗಿ ಕೇಳುವುದು ಕೇಳುವುದಕ್ಕೆ ಮಜಾವಾಗುತ್ತದೆ. ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

Related posts

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಕಚೇರಿಯ ಎದುರು ನಿಲ್ಲಿಸಿದ್ದ ಬೈಕ್‌ ಕಳವು

ಷೇರು ಟ್ರೇಡಿಂಗ್‌ ಹೆಸರಲ್ಲಿ 38,53,961 ರೂ. ವಂಚನೆ