ಮುಸ್ಲಿಂ ಜೋಡಿ ಮದುವೆಗೆ ಸವಿನಯ ಆಮಂತ್ರಣ ಕೋರಿದ ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ

ಮಂಗಳೂರು : ಮುಸ್ಲಿಂ ಜೋಡಿಯೊಂದರ ವಿವಾಹ ಕಾರ್ಯಕ್ರಮಕ್ಕೆ ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಆಮಂತ್ರಣ ಕೋರಿರುವ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ.

ಫರಂಗಿಪೇಟೆಯ ಅಬ್ಬಾಸ್ ಎಂಬವರ ಮೊಮ್ಮಗಳು ಫಾತಿಮಾ ಕೌಸರ್ ವಿವಾಹ ಪಾಣೆಮಂಗಳೂರಿನ ಅಬ್ದುಲ್ ರಾಝಿಕ್ ಎಂಬ ಯುವಕನೊಂದಿಗೆ ಜುಲೈ 18ರಂದು ನೇರಳಕಟ್ಟೆ ಮಾಣಿ ಜನಪ್ರಿಯ ಗಾರ್ಡನ್‌ನಲ್ಲಿ ನಡೆಯಲಿದೆ. ಈ ಜೋಡಿಯ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಸವಿನಯ ಆಮಂತ್ರಣ ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲರ ಹೆಸರಲ್ಲಿದೆ. ಇದೀಗ ಆಮಂತ್ರಣ ಪತ್ರಿಕೆ ವೈರಲ್ ಆಗುತ್ತಿದೆ. ಕೆಲವರು ವಾಟ್ಸ್ಆ್ಯಪ್ ಸ್ಟೇಟಸ್‌ನಲ್ಲೂ ಹಾಕಿಕೊಂಡಿದ್ದಾರೆ.

ಫರಂಗಿಪೇಟೆ ಅಬ್ಬಾಸ್ ಕುಟುಂಬಸ್ಥರು ಬಿಜೆಪಿ ಕಾರ್ಯಕರ್ತರು. ಅವರ ಮನೆಯಲ್ಲಿ ಈ ಹಿಂದೆ ಮದುವೆ ನಡೆದಾಗ ಅಂದು ಬಿಜೆಪಿ ದ.ಕ.ಜಿಲ್ಲಾಧ್ಯಕ್ಷರಾಗಿದ್ದ ಮೋನಪ್ಪ ಭಂಡಾರಿಯವರ ಹೆಸರಿನಲ್ಲಿ ಸವಿನಯ ಆಮಂತ್ರಣ ಪತ್ರಿಕೆ ಸಿದ್ಧಪಡಿಸಿ ಹಂಚಲಾಗಿತ್ತು. ಇದೀಗ ಅವರ ಮನೆಯಲ್ಲಿ ನಡೆಯುತ್ತಿರುವ ಮದುವೆಗೆ ಇಂದಿನ ಬಿಜೆಪಿ ಜಿಲ್ಲಾಧ್ಯಕ್ಷರ ಹೆಸರಿನಲ್ಲಿ ಸವಿನಯ ಆಮಂತ್ರಣ ಕೋರಲಾಗಿದೆ. ಬಿಜೆಪಿ ಕಾರ್ಯಕರ್ತರ ಈ ಅಭಿಮಾನ ತಮಗೆ ಸಂತಸ ತಂದಿದೆ ಎಂದು ಸತೀಶ್ ಕುಂಪಲ ಅವರು ತಿಳಿಸಿದ್ದಾರೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ