ಎನ್‌ಕೌಂಟ‌ರ್ ಪ್ರದೇಶದಲ್ಲಿ ಸಾಮಾಜಿಕ ಕಾರ್ಯಕರ್ತರ ನಿಯೋಗದಿಂದ ಪರಿಶೀಲನೆ

ಹೆಬ್ರಿ : ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ನಡೆದ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಪೀತ್‌ಬೈಲು ಪ್ರದೇಶಕ್ಕೆ ಭೇಟಿ ನೀಡಿದ ಸಾಮಾಜಿಕ ಕಾರ್ಯಕರ್ತರ ನಿಯೋಗ, ಈ ಕುರಿತು ಪರಿಶೀಲನೆ ನಡೆಸಿ, ಇದೊಂದು ನಕಲಿ ಎನ್‌ಕೌಂಟರ್ ಎಂಬುದಾಗಿ ಅಭಿಪ್ರಾಯಪಟ್ಟಿದೆ. ಆದುದರಿಂದ ಈ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ನಿಯೋಗ ರಾಜ್ಯ ಸರಕಾರವನ್ನು ಆಗ್ರಹಿಸಿದೆ.

ಸಾಮಾಜಿಕ ಕಾರ್ಯಕರ್ತರಾದ ಮುನೀರ್ ಕಾಟಿಪಳ್ಳ, ನವೀನ್ ಸೂರಿಂಜೆ, ಕಾವ್ಯ ಅಚ್ಯುತ್, ನಿತಿನ್ ಬಂಗೇರ ಅವರ‌ನ್ನೊಳಗೊಂಡ ನಿಯೋಗ, ಎನ್‌ಕೌಂಟರ್ ನಡೆದಿದೆ ಎನ್ನಲಾದ ಜಯಂತ್ ಗೌಡರ ಮನೆಗೆ ಭೇಟಿ ನೀಡಿತು. ಅಲ್ಲದೆ ಸುತ್ತಮುತ್ತಲಿನ ಪ್ರದೇಶದ ಆದಿವಾಸಿಗಳನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿತು.

ಈ ಬಗ್ಗೆ ಮಾತನಾಡಿದ ಮುನೀರ್ ಕಾಟಿಪಳ್ಳ ಘಟನಾ ಸ್ಥಳವನ್ನು ನೋಡಿದಾಗ ಇದೊಂದು ಎನ್‌ಕೌಂಟ‌ರ್ ಅಲ್ಲ, ನಕಲಿ ಎನ್‌ಕೌಂಟ‌ರ್ ನಡೆಸಿ, ಉದ್ದೇಶಪೂರ್ವಕವಾಗಿ ವಿಕ್ರಂ ಗೌಡನನ್ನು ಹತ್ಯೆ ಮಾಡಲಾಗಿದೆ ಎಂಬ ಸಂಶಯ‌ಗಳು ಬಲವಾ‌ಗುತ್ತವೆ. ಆದುದರಿಂದ ಈ ಬಗ್ಗೆ ರಾಜ್ಯ ಸರಕಾರ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ಆಗಬೇಕು. ಅದಕ್ಕಾಗಿ ಹಿರಿಯ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ಸಮಿತಿ ರಚನೆ ಮಾಡಿ ಎನ್‌ಕೌಂಟರ್ ಕುರಿತು ತನಿಖೆ ನಡೆಸಬೇಕು. ಆ ಮೂಲಕ ಸತ್ಯಾಸತ್ಯತೆಯನ್ನು ಜನರ ಮುಂದೆ ಪಾರದರ್ಶಕವಾಗಿ ಇಡಬೇಕು ಎಂದು ಒತ್ತಾಯಿಸಿದರು.

Related posts

ಬೃಹತ್ ಗೀತೋತ್ಸವದ ವಿಶೇಷ ಆಕರ್ಷಣೆ : 18 ದಿನಗಳ ಹರಿಕಥಾ ಸರಣಿ ಇಂದಿನಿಂದ ಪ್ರಾರಂಭ

ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾ ಕೂಟ: ಉಡುಪಿ ತಂಡದ ಉತ್ತಮ ಸಾಧನೆ

ಮಣಿಪಾಲ ಆರೋಗ್ಯಕಾರ್ಡ್ 2024‌ರ ನೋಂದಾವಣೆಗೆ ಐದು ದಿನ ಬಾಕಿ; 30ನೇ ನವೆಂಬರ್ ಕೊನೆಯ ದಿನ