ಇಂದ್ರಾಳಿ ಹೈಸ್ಕೂಲ್ ಇಂಟರಾಕ್ಟ್ ಪದಗ್ರಹಣ

ಉಡುಪಿ : ರೋಟರಿ ಉಡುಪಿ ಪ್ರಾಯೋಜಿತ ಇಂದ್ರಾಳಿ ಹೈಸ್ಕೂಲ್ ಇಂಟರಾಕ್ಟ್ ಕ್ಲಬ್‌ನ ಪದಗ್ರಹಣ ಸಮಾರಂಭ‌ವು ಶಾಲಾವಠಾರದಲ್ಲಿ ನೆರವೇರಿತು.

ಪದಗ್ರಹಣ ನೆರವೇರಿಸಿದ ಮಾಜಿ ಅಸಿಸ್ಟೆಂಟ್ ಗವರ್ನರ್ ಜಿಲ್ಲಾ ಪಬ್ಲಿಕ್ ಇಮೇಜ್ ಸಭಾಪತಿ ರೋ. ಸುಬ್ರಹ್ಮಣ್ಯ ಬಾಸ್ರಿಯವರು ಮೌಲ್ಯವರ್ಧಿತ ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಗತ ವರ್ಷದ ಇಂಟರಾಕ್ಟ ಅಧ್ಯಕ್ಷ ರಜತ್ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ಈ ವರ್ಷದ ಅಧ್ಯಕ್ಷೆ ಪ್ರತೀಕ್ಷಾ ಅವರು ತಮ್ಮ ತಂಡದ ಪರಿಚಯ ಮಾಡಿದರು.

ರೋಟರಿ ಅಧ್ಯಕ್ಷ ರೋ. ಗುರುರಾಜ ಭಟ್, ಇಂಟರಾಕ್ಟ್ ಸಭಾಪತಿ ರೋ. ಸಾದನಾ ಮುಂಡ್ಕೂರ್, ಶಾಲಾ ಆಡಳಿತ ಮಂಡಳಿ ಸದಸ್ಯ ರತ್ನಾಕರ ಶೆಣೈ, ಶಾಲಾ ಮುಖ್ಯೋಪಾಧ್ಯಾಯ ವಿನಾಯಕ ಕಿಣಿ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಶಶಿರಾಜ್ ಕುಂದರ್ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರೋ.ಸುಬ್ರಹ್ಮಣ್ಯ ಕಾರಂತ, ರೋ. ಶುಭ ಬಾಸ್ರಿ, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ