ಭಾರತ ಸರ್ಕಾರ ಉಗ್ರ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡಲಿದೆ – ಸುನಿಲ್ ಕುಮಾರ್

ಉಡುಪಿ : ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಹೇಯ ಭಯೋತ್ಪಾದಕ ಘಟನೆಯನ್ನು ಇಡಿ ದೇಶವೇ ಒಟ್ಟಾಗಿ ಖಂಡಿಸಬೇಕಿದೆ. ಹಿಂದುಗಳನ್ನೇ ಗುರಿಯಾಗಿಸಿ‌ ನಡೆಸಿದ ಈ ಪೈಶಾಚಿಕ‌ ಕ್ರಮ ಎಲ್ಲರಿಗೂ ಎಚ್ಚರಿಕೆಯ ಗಂಟೆ ಎಂದು ಮಾಜಿ ಸಚಿವ ವಿ. ಸುನೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಉಗ್ರರಿಗೆ ಧರ್ಮ ಇಲ್ಲ ಎಂದು ವಾದಿಸುತ್ತಿದ್ದವರು ಈ ಘಟನೆಯ ಬಳಿಕ ಏನು ಹೇಳುತ್ತಾರೆ? ನಿಮ್ಮ‌ ಧರ್ಮ ಯಾವುದು ಎಂದು ಪ್ರಶ್ನಿಸಿ ಈ ಕೃತ್ಯ ಎಸಗಿರುವುದರಿಂದ ಉಗ್ರರ ಧರ್ಮ ಯಾವುದು ಎಂದು ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಸಾರ್ವಭೌಮತೆಯನ್ನು ಪ್ರಶ್ನಿಸಲು ಹೊರಟರೆ ಉಗ್ರರು ಹಾಗೂ ಅವರನ್ನು ಪೋಷಿಸುವ ಪಾಕಿಸ್ತಾನ ಉಗ್ರ ಪರಿಣಾಮವನ್ನೇ ಎದುರಿಸುತ್ತದೆ. ಭಾರತ ಸರ್ಕಾರ ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Related posts

ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಸಂಘಟಿತವಾಗಿ ಸರಕಾರಿ ಶಾಲೆಗಳನ್ನು ಉಳಿಸೋಣ – ಶಾಸಕ ಗಂಟಿಹೊಳೆ ಕರೆ

37 ಮರಳು ಬ್ಲಾಕ್‌ಗಳಲ್ಲಿ ಮರಳು ತೆರವುಗೊಳಿಸಲು ಆಶಯ ಪತ್ರ ವಿತರಣೆ : ಸಿಇಓ ಬಾಯಲ್