ಅಬುಧಾಬಿಯ ಭಾರತದ ರಾಯಭಾರಿ ಕಚೇರಿ ಪ್ರಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

ಉಡುಪಿ : ಯು.ಎ.ಇ.ರಾಜಧಾನಿ ಅಬುಧಾಬಿಯಲ್ಲಿರುವ ಭಾರತದ ರಾಯಭಾರಿ ಕಛೇರಿಯ ಪ್ರಾಂಗಣದಲ್ಲಿ ಭಾರತದ 78ನೆಯ ಸ್ವಾತಂತ್ರ್ಯೇೂತ್ಸವ ಕಾರ್ಯಕ್ರಮ ನಡೆಯಿತು.

ಧ್ವಜಾರೋಹಣಗೈದ ಯು.ಎ.ಇ.ಯಲ್ಲಿನ ಭಾರತದ ರಾಯಭಾರಿ ಗೌರವಾನ್ವಿತ ಸಂಜಯ್ ಸುಧೀರ್ ಮಾತನಾಡಿ ‘ಭಾರತ ವಿಶ್ವದ ಮೂರನೆಯ ಆರ್ಥಿಕ ಶಕ್ತಿ’ಯಾಗಿ ಹೊರ ಹೊಮ್ಮುವ ಪಥದಲ್ಲಿದ್ದು ಭಾರತ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ ಸಾಧನೆಯನ್ನು ಪರಿಚಯಿಸಿ ಶ್ಲಾಘಿಸಿದರು. ಯು.ಎ.ಇ.ಮತ್ತು ಭಾರತದ ನಡುವಿನ ಉತ್ತಮ ಭಾಂದವ್ಯ ಎರಡು ರಾಷ್ಟ್ರಗಳ ಅಭಿವೃದ್ಧಿಗೆ ಪೂರಕವಾಗಿ ನಿಂತಿದೆ. ಅಬುಧಾಬಿಯಲ್ಲಿನ ಮಂದಿರ ಸ್ಥಾಪನೆ ಎರಡು ರಾಷ್ಟ್ರಗಳ ಭಾವನಾತ್ಮಕ ಬೆಸುಗೆಯಾಗಿ ನಿಂತಿದೆ ಎಂದು ವರ್ಣಿಸಿ ಶುಭಕೇೂರಿದರು.

ಇದೇ ಸಂದರ್ಭದಲ್ಲಿ ವಿಶೇಷ ಸಾಧಕರನ್ನು ಮತ್ತು ಯು.ಎ.ಇ.ಯಲ್ಲಿ ನೆಲಸಿರುವ ವಿವಿಧ ಸಮೂಹದ ಮುಖ್ಯಸ್ಥರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

ಯು.ಎ.ಇ. ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತಮ ಶೆಟ್ಟಿ, ಅಬುಧಾಬಿ ಪ್ರವಾಸದಲ್ಲಿರುವ ಪ್ರೊ.ಕೊಕ್ಕರ್ಣೆ ಸುರೇಂದ್ರ‌ನಾಥ ಶೆಟ್ಟಿಯವರು ಹಾಗೂ ಅಬುದಾಭಿಯಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಗಣ್ಯರು ಭಾರತದ ರಾಯಭಾರಿಗಳಾದ ಸಂಜಯ್ ಸುಧೀರ್‌ರವರಿಗೆ ಭಾರತದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಶುಭಾಶಯ ಕೇೂರಿದರು. ಅಬುಧಾಬಿಯಲ್ಲಿ ನೆಲೆಸಿರುವ ಭಾರತೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ