ಮಳೆಯ ಅಬ್ಬರದ ಜೊತೆಯಲ್ಲೇ ಡೆಂಗ್ಯೂ ಹೆಚ್ಚಳ; ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ

ಉಡುಪಿ : ಕರಾವಳಿ ಜಿಲ್ಲೆ ಉಡುಪಿಯನ್ನು ಮುಂಗಾರು ಮಳೆಯ ಜೊತೆಗೆ ಡೆಂಗ್ಯೂ ಕೂಡ ಕಾಡುತ್ತಿದೆ. ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 250ಕ್ಕೆ ಏರಿಕೆಯಾಗಿದೆ. ಸುಮಾರು 30 ಡೆಂಗ್ಯೂ ಜ್ವರ ಪೀಡಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಮಂದಿ ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ರೋಗಲಕ್ಷಣ ಕಡಿಮೆ ಇರುವವರಿಗೆ ವಾರ್ಡ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಾರ್ವಜನಿಕ ಸ್ಥಳಗಳಲ್ಲಿ ರಾಂಡಂ ಆಗಿ ಟೆಸ್ಟ್ ಮಾಡಲಾಗುತ್ತಿದೆ. ನೀರು ಹೆಚ್ಚು ನಿಲ್ಲುವ ಸ್ಥಳಗಳಲ್ಲಿ ಆರೋಗ್ಯ ಇಲಾಖೆ ಫಾಗಿಂಗ್ ಮತ್ತು ಲಾರ್ವಾಗಳನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದೆ.

ಉಡುಪಿಯ ಆರೋಗ್ಯ ಇಲಾಖೆಗೆ ಮಲ್ಪೆ ಮೀನುಗಾರಿಕೆ ಬಂದರು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಸಾವಿರಕ್ಕೂ ಮಿಕ್ಕಿ ಬೋಟ್ ಗಳು, ಮಲ್ಪೆ ಬಂದರು ಮತ್ತು ಸುತ್ತಮುತ್ತಲ ನದಿ ತೀರದಲ್ಲಿ ಲಂಗರು ಹಾಕಿರುವ ಪರಿಣಾಮ ಸಿಂಟೆಕ್ಸ್ , ಡಯರ್ ಗಳು ಮತ್ತು ಪಾತ್ರೆಗಳಲ್ಲಿ ನೀರು ತುಂಬಿಕೊಂಡಿರುವುದರಿಂದ ಶುಚಿತ್ವ ಕಾಪಾಡುವುದು ಸವಾಲು. ಈ ಸಂಬಂಧ ಬೋಟ್ ಮಾಲಕರ ಸಭೆಗಳನ್ನು ನಡೆಸಿರುವ ಉಡುಪಿ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಸೂಚನೆಗಳನ್ನು ನೀಡಿದೆ.

Related posts

ಉಡುಪಿ ಜಿಲ್ಲೆಯಲ್ಲಿ ಉಪವಾಸ, ಧ್ಯಾನದೊಂದಿಗೆ ಗುಡ್ ಫ್ರೈಡೆ ಆಚರಣೆ

ಬಿಎಸ್‌ಎನ್‌ಎಲ್ ಸಂಪರ್ಕದ ಕುಂದು ಕೊರತೆ, ಗುಣಮಟ್ಟ ಉತ್ತಮಗೊಳಿಸುವಿಕೆ ಸಭೆಯಲ್ಲಿ ಸಂಸದ ಕೋಟ ಭಾಗಿ

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ