ಯಕ್ಷಗಾನ ಕಲಾರಂಗದ 54ನೆಯ ಮನೆಯ ಉದ್ಘಾಟನೆ

ಕುಂದಾಪುರ : ಆರ್ಥಿಕವಾಗಿ ದುರ್ಬಲರಾದ ಕಲಾವಿದರು, ವಿದ್ಯಾರ್ಥಿಗಳು ಮತ್ತು ಮತ್ತು ದಾನಿಗಳ ನಡುವೆ ವಿಶ್ವಾಸಾರ್ಹ ಸಂಪರ್ಕ ಸೇತುವಾಗಿ ಉಡುಪಿಯ ಯಕ್ಷಗಾನ ಕಲಾರಂಗದ ಸೇವೆ ಅನನ್ಯವಾದುದು. ಉಳಿದ ಸಂಘಟನೆಗಳಿಗೆ ಮಾದರಿಯಾಗುವಂತೆ, ಸಮಾಜಮುಖಿಯಾಗಿ 50 ವರ್ಷಗಳನ್ನು ಉತ್ತರಿಸಿದ್ದು, ಈ ಸಂಸ್ಥೆಯ ಹೆಗ್ಗಳಿಕೆಯಾಗಿದೆ, ಎಂದು ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸೌಕೂರು ಮೇಳದ ಯಕ್ಷಗಾನ ಕಲಾವಿದ ನಂದಕುಮಾರ ಪಾಣಾರ ಇವರಿಗೆ ನಿರ್ಮಿಸಿದ “ಲಲಿತಾ ಸದನ”ವನ್ನು ಉದ್ಘಾಟಿಸುತ್ತಾ ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು.

ಕುಂದಾಪುರ ತಾಲೂಕಿನ ಬಿದ್ಕಲ್ಕಟ್ಟೆಯಲ್ಲಿ ಜುಲೈ 7ರಂದು ನಡೆದ ಪುಟ್ಟ ಹೃದಯಸ್ಪರ್ಶಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು ವಹಿಸಿದ್ದರು. ಸಮಾರಂಭದಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಎಚ್. ಎಸ್. ಶೆಟ್ಟಿ ಅಭ್ಯಾಗತರಾಗಿ ಭಾಗವಹಿಸಿದ್ದರು. ಖ್ಯಾತ ಲೆಕ್ಕಪರಿಶೋಧಕರಾದ, ಕುಂದಾಪುರ ಆಚಾರ್ಯ ಕುಟುಂಬದ ಶ್ರೀ ವಸಂತ ಆಚಾರ್ಯ ಮತ್ತು ಶ್ರೀಮತಿ ಶೋಭಾ ವಿ. ಆಚಾರ್ಯ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ, ಸಂಸ್ಥೆಯ 54ನೇ ಮನೆಯಾಗಿದ್ದು, ಕಾರ್ಯಕ್ರಮದಲ್ಲಿ ಆಚಾರ್ಯ ಕುಟುಂಬದ ಸಹೋದರರಾದ ಗಣೇಶ ಆಚಾರ್ಯ, ಸುರೇಶ ಆಚಾರ್ಯ, ದಿನೇಶ್ ಆಚಾರ್ಯ ಹಾಗೂ ವಸಂತ ಆಚಾರ್ಯರ ಪುತ್ರ ಸಿದ್ದಾರ್ಥ ಆಚಾರ್ಯ ಉಪಸ್ಥಿತರಿದ್ದರು. ಸೌಕೂರು ಮೇಳದ ಯಜಮಾನರೂ ಸಂಸ್ಥೆಯ ಉಪಾಧ್ಯಕ್ಷರೂ ಆದ ಪಿ. ಕಿಶನ್ ಹೆಗ್ಡೆ ಉಪಾಧ್ಯಕ್ಷ ವಿ. ಜಿ. ಶೆಟ್ಟಿ, ದಾನಿಗಳಾದ ಯು. ವಿಶ್ವನಾಥ ಶೆಣೈ, ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಗಣೇಶ್ ಶೆಟ್ಟಿ ಮಂಡಳ್ಳಿ, ಸಂಸ್ಥೆಯ ಸದಸ್ಯರಾದ ಎಚ್. ಎನ್. ಶೃಂಗೇಶ್ವರ, ವಿಜಯಕುಮಾರ್ ಮುದ್ರಾಡಿ, ಬಿ. ಭುವನ ಪ್ರಸಾದ್ ಹೆಗ್ಡೆ, ಸಂತೋಷ್ ಕುಮಾರ್ ಶೆಟ್ಟಿ, ಅಶೋಕ ಎಂ., ಹೆಚ್.ಎನ್. ವೆಂಕಟೇಶ್, ಅನಂತರಾಜ ಉಪಾಧ್ಯಾಯ, ಗಣೇಶ್ ಬ್ರಹ್ಮಾವರ, ಡಾ. ರಾಜೇಶ್ ನಾವುಡ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಎಮ್. ಗಂಗಾಧರ್ ರಾವ್ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರ್ವಹಿಸಿದ ಕಾರ್ಯಕ್ರಮದ ಕೊನೆಗೆ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ ಧನ್ಯವಾದ ಸಲ್ಲಿಸಿದರು.

Related posts

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್

ಮಲ್ಪೆ ಮಹಿಳೆಯ ಬ್ಯಾಗ್‌ ಎಳೆದು ಪರಾರಿಯಾದ ಆರೋಪಿ ಪೊಲೀಸ್ ವಶಕ್ಕೆ