ಜನವರಿ 7ರಂದು ಅಮ್ಮಂಜೆಯಲ್ಲಿ ನೂತನ ಟಿಶ್ಯೂ ಪೇಪರ್ ಕೈಗಾರಿಕಾ ಘಟಕದ ಉದ್ಘಾಟನೆ

ಉಡುಪಿ : ಸವಿತಾ ಸಮಾಜ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಅಮ್ಮಂಜೆಯಲ್ಲಿ ನಿರ್ಮಾಣಗೊಂಡಿರುವ ನೂತನ ಟಿಶ್ಯೂ ಪೇಪರ್ ಕೈಗಾರಿಕಾ ಘಟಕದ ಉದ್ಘಾಟನಾ ಸಮಾರಂಭವು ಇದೇ ಜ.7ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ನವೀನ್ ಚಂದ್ರ ಭಂಡಾರಿ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ನೂತನ ಘಟಕವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸವಿತಾ ಟಿಶ್ಯೂ ಪೇಪರ್ ಉತ್ಪನ್ನಗಳ ಬಿಡುಗಡೆಗೊಳಿಸಲಿದ್ದಾರೆ. ಜಿಲ್ಲಾ ಸವಿತಾ ಸಮಾಜದ ಗೌರವ ಅಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ ಪ್ರಸ್ತಾವನೆ ಮಾಡಲಿದ್ದಾರೆ ಎಂದರು.

ಇದು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಅವಕಾಶಗಳನ್ನು ವೃದ್ಧಿಸುವ ಹಾಗೂ ಸ್ಥಳೀಯ ಆರ್ಥಿಕತೆಗೆ ವೇಗ ನೀಡುವ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಈ ಘಟಕದಲ್ಲಿ ಉನ್ನತ ಗುಣ ಮಟ್ಟದ ಟಿಶ್ಯೂ ಪೇಪರ್ ಉತ್ಪನ್ನಗಳನ್ನು ಉತ್ಪಾದಿಸಿ ಕ್ಷೌರಿಕ ಸಮುದಾಯದ ಅಗತ್ಯತೆಗಳನ್ನು ಪೂರೈಸುವ ಜೊತೆಗೆ ಹೊಟೇಲ್, ಬಾರ್ ಮತ್ತು ಕ್ಯಾಟರಿಂಗ್ ಉದ್ಯಮಗಳಿಗೂ ಒದಗಿಸಲಾಗುವುದು ಎಂದು ತಿಳಿಸಿದರು.

ಸಂಘದ ವತಿಯಿಂದ ಸವಿತಾ ಸಮುದಾಯದ ಆರೋಗ್ಯದ ದೃಷ್ಟಿಕೋನದಿಂದ ಆರಂಭಿಸಿರುವ ಸವಿತಾ ಡಯಾಗೋಸ್ಟಿಕ್ ಸೆಂಟರ್‌ನ ಉದ್ಘಾಟನೆ ಸಮಾರಂಭ ಜ.7ರಂದು ಮಧ್ಯಾಹ್ನ 3ಗಂಟೆಗೆ ಅಂಬಲಪಾಡಿ ಸವಿತಾ ಸಮಾಜ ಸಮುದಾಯ ಭವನದಲ್ಲಿ ನಡೆಯಲಿದೆ ಎಂದರು.

Related posts

ಮೈಕ್ರೋ-ಫೈನಾನ್ಸ್, ಲೇವಾದೇವಿ ಸಂಸ್ಥೆಗಳ ನೋಂದಣಿ ಕಡ್ಡಾಯ – ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ

ಕೆ. ಸುರೇಂದ್ರ ಶೆಣೈ ಅವರಿಗೆ ಯಕ್ಷಗಾನ ಕಲಾರಾಧಕ ಪ್ರಶಸ್ತಿ

ಸ್ಪಂದಿಸದ ಸಂಬಂಧಿಕರು, ಆಶ್ರಯ ನೀಡಿದ ಹೊಸಬೆಳಕು