ಎಂಜಿಎo ಕಾಲೇಜಿನಲ್ಲಿ 45ನೇ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ – 2024 ಉದ್ಘಾಟನೆ

ಉಡುಪಿ : ನಾಟಕ, ಯಕ್ಷಗಾನದಲ್ಲಿ ನಟಿಸುವುದು ಸುಲಭ ಸಾಧ್ಯವಲ್ಲ. ಏಕೆಂದರೆ ಇಲ್ಲಿ ಸಿನೆಮಾದಂತೆ ರಿಹರ್ಸಲ್ ಇಲ್ಲ, ಪ್ರತಿಭಾವಂತ ಕಲಾವಿರು ಮಾತ್ರ ಇಲ್ಲಿ ಮಿಂಚಬಲ್ಲರು. ಇಂತಹ ನಾಟಕ ಸ್ಪರ್ಧೆಗಳಿಂದ ರಂಗಭೂಮಿಯ ಬೆಳವಣಿಗೆ ಸಾಧ್ಯ ಎಂದು ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಹೇಳಿದರು.

ಅವರು ಉಡುಪಿ ಎಂಜಿಎo ಕಾಲೇಜಿನ ಮುದ್ದಣ ಮಂಟಪದಲ್ಲಿ ಬುಧವಾರ ನಡೆದ ರಂಗಭೂಮಿ ಉಡುಪಿ ಇದರ 60ರ ಸಂಭ್ರಮೋತ್ಸವದ ಪ್ರಯುಕ್ತ ದಿ. ಡಾ. ಟಿಎಂಎ ಪೈ, ದಿ.ಎಸ್.ಎಲ್. ನಾರಾಯಣ ಭಟ್ ಮತ್ತು ಮಲ್ಪೆ ಮಧ್ವರಾಜ್ ಸ್ಮಾರಕ ’45ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ -2024 ‘ನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ರಂಗಭೂಮಿ ನಟರು ಸಿನೆಮಾ ರಂಗದಲ್ಲೂ ಅಭಿನಯಿಸಿ ಮಿಂಚಿದ್ದಾರೆ. ಇವತ್ತು ನಾಟಕ ವೀಕ್ಷಣೆಗೆ ಪ್ರೇಕ್ಷಕರ ಕೊರತೆಯಿದೆ. ಈ ನಿಟ್ಟಿನಲ್ಲಿ ರಂಗಭೂಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರ ತಂಡ ರಂಗಭೂಮಿಯನ್ನು ಉಳಿಸಿ ಬೆಳೆಸುವ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ. ನಾಟಕ ವೀಕ್ಷಿಸಲು ನಾವೆಲ್ಲಾ ಪ್ರೇರೇಪಿಸಬೇಕು. ಇಂತಹ ಕೆಲಸವಾದರೆ ಮಾತ್ರ ಈ ಕಲೆಯ ಬೆಳವಣಿಗೆ ಸಾಧ್ಯ ಎಂದ ಅವರು ಮಾಹೆ ಸಂಸ್ಥೆ ಮುಂದೆಯೂ ರಂಗಭೂಮಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, ರಂಗಶಿಕ್ಷಣ ಮಕ್ಕಳಿಗೆ ಕೊಡಬೇಕು ಎನ್ನುವ ಉದ್ದೇಶದಿಂದ ಈ ವರ್ಷ ಕೆಲವು ಆಯ್ದ ಶಾಲೆಗಳಲ್ಲಿ ಪ್ರಾರಂಭಿಸಿದ್ದೇವೆ. ಮುಂದೆ ಅದನ್ನು ಜಿಲ್ಲೆಯಾದ್ಯಂತ ವಿಸ್ತರಿಸುವ ಚಿಂತನೆಯಿದೆ. ರಂಗಭಾಷೆ ಕಾರ್ಯಕ್ರಮದ ಮೂಲಕ ಕಾಲೇಜುಗಳ 100 ಮಂದಿವಿದ್ಯಾರ್ಥಿಗಳನ್ನು ಆರಿಸಿಕೊಂಡು ರಂಗ ಶಿಕ್ಷಣ ನೀಡಲಾಗುತ್ತಿದೆ. ಭವಿಷ್ಯದಲ್ಲಿ ರಂಗಭೂಮಿ ನಟರು ಹಾಗೂ ಪ್ರೇಕ್ಷಕರ ಕೊರತೆ ಎದುರಿಸಬಾರದು ಎನ್ನುವ ಚಿಂತನೆ ಇಲ್ಲಿದೆ. ರಂಗಭೂಮಿ ಸಂಸ್ಥೆಯೊAದು ೪೫ನೇ ನಾಟಕ ಸ್ಪರ್ಧೆಯನ್ನು ಏರ್ಪಡಿಸುತ್ತಿರುವುದು ರಾಜ್ಯದಲ್ಲಿಯೇ ಪ್ರಪ್ರಥಮವಾಗಿದೆ ಎಂದರು.

ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ. ಬಂಗೇರ ಮಾತನಾಡಿ, ರಂಗಭೂಮಿ ಜೊತೆಗೆ ಅವಿನಾಭವ ಸಂಬoಧವಿರುವುದು ಖುಷಿ ನೀಡಿದೆ ಎಂದರು.

ಎoಜಿಎo ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮಿ ನಾರಾಯಣ ಕಾರಂತ, ರಂಗಭೂಮಿ ಉಪಾಧ್ಯಕ್ಷರುಗಳಾದ ಎನ್. ರಾಜಗೋಪಾಲ ಬಲ್ಲಾಳ್, ಭಾಸ್ಕರ ರಾವ್ ಕಿದಿಯೂರು. ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.

ಶ್ರೀಪಾದ ಹೆಗ್ಡೆ ಸ್ವಾಗತಿಸಿದರು. ಗೀತಾಂ ಗಿರೀಶ್ ತಂತ್ರಿ ರಂಗಗೀತೆ ಹಾಡಿದರು.

ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಮಣಿಪಾಲ, ಎಂಜಿಎo ಕಾಲೇಜು ಉಡುಪಿ ಹಾಗೂ ಪಿವಿಎಸ್ ಸಮೂಹ ಸಂಸ್ಥೆಗಳು ಮಂಗಳೂರು, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮಂಗಳೂರು ಮತ್ತು ಉಡುಪಿ ಸಹಕಾರದಲ್ಲಿ ಡಿ.4 ರಿಂದ 15 ರವರೆಗೆ ಪ್ರತಿ ದಿನ ಸಂಜೆ 6.30 ರಿಂದ ವಿವಿಧ ನಾಟಕ ತಂಡಗಳಿoದ ನಾಟಕಗಳು ಪ್ರದರ್ಶನಗೊಳ್ಳಲಿವೆ.

Related posts

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್