ಸುಬ್ರಹ್ಮಣ್ಯದಲ್ಲಿ ಲೋಡುಗಟ್ಟಲೆ ಕಸದ ರಾಶಿ, ಕೊಳೆಯುತ್ತಿದೆ ಕಸಗಳು, ಗಬ್ಬು ವಾಸನೆ; ರೋಗ ಹರಡುವ ಭೀತಿಯಲ್ಲಿ ಸಾರ್ವಜನಿಕರು

ದಿನಂಪ್ರತಿ ಸಾವಿರಾರು ಜನರು ಬರುವ ಸುಬ್ರಹ್ಮಣ್ಯದಲ್ಲಿ ಕಸ ವಿಲೇವಾರಿ ಘಟಕದಲ್ಲಿ ಲೋಡುಗಟ್ಟಲೆ ಕಸದ ರಾಶಿ ಬಿದ್ದು ಕೊಳೆಯಲು ಆರಂಭವಾಗಿದೆ, ಇಂಜಾಡಿ ಬಳಿಯ ಈ ಘಟಕದಲ್ಲಿ ಗಬ್ಬು ವಾಸನೆ ಹರಡುತ್ತಿದ್ದು ಸಾರ್ವಜನಿಕರಿಗೆ ರೋಗ ಭೀತಿ ಎದುರಾಗಿದೆ.

ಗ್ರಾ.ಪಂ. ವತಿಯಿಂದ ನಿರ್ವಹಿಸಲ್ಪಡುವ ಕಸ ವಿಲೇವಾರಿ ಘಟಕ ಇಂಜಾಡಿ ಬಳಿ ಇದೆ. ಇಲ್ಲಿಗೆ ಪಂಚಾಯತ್‌ನ ಕಸ ವಿಲೇವಾರಿ ಘಟಕದ ವಾಹನಗಳು ಕಸ ಸಂಗ್ರಹಿಸಿ ತಂದು ಹಾಕುತ್ತಿವೆ. ಇಲ್ಲಿ ಸಂಜೀವಿನಿಯರು ಹಾಗೂ ಗ್ರಾ.ಪಂ ದಿನಗೂಲಿಯ ಕೆಲವರು ಸೇರಿ ಕಸ ವಿಂಗಡನೆ ಮಾಡುತಿದ್ದಾರೆ. ಆದರೆ ಇಲ್ಲಿ ವಿಂಗಡನೆ ಆಗುತ್ತಿರುವ ಕಸ ಮತ್ತು ಇಲ್ಲಿಗೆ ಸರಬರಾಜು ಆಗುವ ಕಸಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು ಸಾಮರ್ಥ್ಯಕ್ಕಿಂತ ಹೆಚ್ಚು ಕಸವೂ ಸಂಗ್ರಹವಾಗುತ್ತಿದೆ. ಇದೇ ಮುಂದುವರೆದರೆ ಮುಂದೊಂದು ದಿನ ಇದು ಅಪಾಯಕಾರಿಯಾಗುವ ಮುನ್ಸೂಚನೆ ಇದೆ.

ಇಲ್ಲಿ ದಿನ ಪ್ರತಿ ಕಸ ಸಂಗ್ರಹವಾಗುತಿದ್ದರೂ ಅಲ್ಪ ಪ್ರಮಾಣದ ಕಸವಷ್ಟೇ ವಿಲೇವಾರಿಯಾಗುತಿದೆ. ರಟ್ಟು, ಹಾಲಿನ ಪ್ಯಾಕೆಟ್, ನೀರಿನ ಬಾಟಲ್ ಮತ್ತಿತರ ವಸ್ತುಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಅಂತದನ್ನು ಸಂಬಂಧಿಸಿದವರು ತೆಗೆದುಕೊಂಡು ಹೋಗುತಿದ್ದಾರೆ. ಆದರೆ ಈಗಾಗಲೇ ಬಿದ್ದಿರುವ ಲೋಡ್‌ಗಟ್ಟಲೆ ಕಸ ಕೊಳೆಯುತಿದ್ದು ಅದು ಭಾರಿ ಪ್ರಮಾಣದಲ್ಲಿ ದುರ್ವಾಸನೆಯೂ ಎದ್ದಿದೆ. ಅಲ್ಲಿಂದ ಬರುವ ಕೊಳಚೆ ನೀರು ನೇರವಾಗಿ ಕಣಿ ಸೇರಿ ನದಿ ಸೇರುತ್ತಿದೆ.

ಗ್ರಾ.ಪಂ. ವತಿಯಿಂದ ಪ್ಲಾಸ್ಟಿಕ್ ಬರ್ನಿಂಗ್ ಮೆಶಿನ್ ಕೆಲವೇ ವರ್ಷಗಳ ಹಿಂದೆಯಷ್ಟೆ ಅಳವಡಿಸಲಾಗಿದ್ದು ದಿನಪ್ರಂತಿ ವಿಲೇವಾರಿ ಆದ ಪ್ಲಾಸ್ಟಿಕ್‌ನ್ನು ಕೆಮಿಕಲ್ ಹಾಕಿ ಬರ್ನ್ ಮಾಡಲಾಗುತಿತ್ತು. ಆದರೆ ಈ ಯಂತ್ರಗಳು ಕೈಕೊಟ್ಟು ಬರ್ನಿಂಗ್ ನಿಲ್ಲಿಸಲಾಗಿದೆ.

Related posts

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಕಡಿದು ಬಿಸಾಡಿದ ಬಾಳೆ ದಿಂಡಿನಲ್ಲಿ ಚಿಗುರುಡೆದ ಬಾಳೆಗೊನೆ