ಡಾ। ಶ್ರುತಿ ಬಲ್ಲಾಳ್‌ರವರಿಗೆ ಐಎಂಎ ಪುರಸ್ಕಾರ

ಆರ್ಯಭಟ ಪ್ರಶಸ್ತಿ ಪುರಸ್ಕೃತೆ, ಮಧುಮೇಹ ತಜ್ಞೆ ಡಾ। ಶ್ರುತಿ ಬಲ್ಲಾಳ್‌ರವರನ್ನು, ವೈದ್ಯರ ದಿನಾಚರಣೆಯಂದು ಭಾರತೀಯ ವೈದ್ಯರ ಸಂಘ ಉಡುಪಿ ಕರಾವಳಿ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.

ಸಾಮಾಜಿಕ ಸೇವಾ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿರುವ ಡಾ. ಶ್ರುತಿ ಬಳ್ಳಾಲ್ ಅವರು ಬಿಗ್ ಮೆಡಿಕಲ್ ಸೆಂಟರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅವರು ತಮ್ಮ ಸಾಮಾಜಿಕ ಜವಾಬ್ದಾರಿ ಚಟುವಟಿಕೆಗಳ ಭಾಗವಾಗಿ ಮಧುಮೇಹ ತಡೆಗಟ್ಟುವಿಕೆ, ಮುಂದೂಡಿಕೆ, ಆರೈಕೆ, ಉತ್ತಮ ಜೀವನ ಶೈಲಿಯ ಬಗ್ಗೆ ಶಾಲಾ-ಕಾಲೇಜು ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಈಗಾಗಲೇ 90ಕ್ಕೂ ಅಧಿಕ ಉಚಿತ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಉಡುಪಿಯ ಬಿಗ್ ಮೆಡಿಕಲ್ ಸೆಂಟರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕದ ಪ್ರಥಮ ಮಹಿಳಾ ಹೃದಯ ತಜ್ಞೆ ಡಾ। ವಿಜಯಲಕ್ಷ್ಮಿ ಬಾಳೇಕುಂದ್ರಿ, ಭಾ.ವೈ.ಸಂಘದ ಅಧ್ಯಕ್ಷೆ ಡಾ। ರಾಜಲಕ್ಷ್ಮಿ, ಡಾ। ಆಮ್ನಾ ಹೆಗ್ಡೆ, ಡಾ. ಅರ್ಚನಾ ಭಕ್ತ, ಡಾ। ಇಂದಿರಾ ಶಾನ್ ಭಾಗ್ ಹಾಗೂ ಡಾ। ಅಕ್ಷತಾ ರಾವ್ ಉಪಸ್ಥಿತರಿದ್ದರು.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ