ಲಾರಿಯಲ್ಲಿ ಅಕ್ರಮ ಮರದ ದಿಮ್ಮಿ ಸಾಗಾಟ : 6 ಲಕ್ಷ ರೂ. ಮೌಲ್ಯದ ಸೊತ್ತು ಜಪ್ತಿ..!

ಮಂಗಳೂರು : ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರದ ದಿಮ್ಮಿಗಳನ್ನು ಮಂಗಳೂರು ಅರಣ್ಯ ಸಂಚಾರಿ ದಳ ಪತ್ತೆಹಚ್ಚಿದೆ.
ಬೈಕಂಪಾಡಿಯಲ್ಲಿ ವಿವಿಧ ಜಾತಿಯ 61 ದಿಮ್ಮಿಗಳನ್ನು ಸೇರಿ ಒಟ್ಟು 6 ಲಕ್ಷ ರೂ. ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿದ್ದಾರೆ.

ಪ್ರಕರಣದಲ್ಲಿ ಮುತ್ತಪ್ಪ ಬಿನ್ ಯಲ್ಲಪ್ಪ ಹೊಸಮನಿ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಪ್ರಶಾಂತ್, ಶಿವಾನಂದ ಸದೇಪ ಮಾದರ, ಮಂಜುನಾಥ, ವಾಹನ ಚಾಲಕ ಜಯಪ್ರಕಾಶ್ ಭಾಗವಹಿಸಿದ್ದರು.
ಮಂಗಳೂರು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಶ್ರೀಕಾಂತ್ ಎಂ. ಮಾರ್ಗದರ್ಶನದಲ್ಲಿ ಪ್ರಭಾರ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Related posts

ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ; ನಾಲ್ವರು ಅರೆಸ್ಟ್

ರಸ್ತೆಗೆ ಮೋರಿ ಅಡ್ಡವಾಗಿಟ್ಟ ಕಿಡಿಗೇಡಿಗಳು; ಮೋರಿಗೆ ಢಿಕ್ಕಿಯಾಗಿ ಬೈಕ್ ಸವಾರನಿಗೆ ಗಾಯ

ರಾಜ್ಯದ ಹೋಟೆಲ್, ಉಪಾಹಾರ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ : ದಿನೇಶ್ ಗುಂಡೂರಾವ್ ಘೋಷಣೆ