ಅಕ್ರಮ ಮರಳು ಸಾಗಾಟ ಪತ್ತೆ; 9 ಸಾವಿರ ರೂ. ಮೌಲ್ಯದ 3 ಯುನಿಟ್‌ ಮರಳು ಸಹಿತ ಟಿಪ್ಪರ್‌ ವಶ

ಕುಂದಾಪುರ : ಜಪ್ತಿ ಗಾಲವೇಶ್ವರ ದೇವಸ್ಥಾನದ ರಸ್ತೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಟಿಪ್ಪರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗ್ರಾಮಾಂತರ ಠಾಣೆ ಎಸ್‌ಐ ಭೀಮಾಶಂಕರ ಸಿನ್ನೂರ, ಟಿಪ್ಪರ್‌ ವಾಹನ ನಿಲ್ಲಿಸಲು ಸೂಚಿಸಿದಾಗ ಟಿಪ್ಪರ್‌ ಚಾಲಕ ನಿಲ್ಲಿಸದೇ ಇಂಬಾಳಿ ಕ್ರಾಸ್‌ಗೆ ತೆಗೆದುಕೊಂಡು ಹೋಗಿದ್ದ. ಅಡ್ಡಗಟ್ಟಿ ನಿಲ್ಲಿಸಿದಾಗ ಚಾಲಕ ಟಿಪ್ಪರ್‌ ಬಿಟ್ಟು ಪರಾರಿಯಾಗಿದ್ದಾನೆ.

ವಶಪಡಿಸಿಕೊಂಡಿದ್ದ ಟಿಪ್ಪರ್‌ನಲ್ಲಿ 9 ಸಾವಿರ ರೂ. ಮೌಲ್ಯದ 3 ಯುನಿಟ್‌ ಮರಳು ಪತ್ತೆಯಾಗಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ