ಮಣಿಪಾಲದಲ್ಲಿ ಅಕ್ರಮ ಮದ್ಯ ಮಾರಾಟ : ಇಬ್ಬರು ಅಂದರ್

ಮಣಿಪಾಲ: ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆಯುವಲ್ಲಿ ಮಣಿಪಾಲ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಅಬ್ದುಲ್‌ ರಜಾಕ್‌ (26), ಮುದುಕಪ್ಪ (39) ಎಂದು ಗುರುತಿಸಲಾಗಿದೆ.

ಚುನಾವಣೆ ನಿಮಿತ್ತ ಮದ್ಯಮಾರಾಟ ನಿಷೇಧವಿದ್ದರೂ 80 ಬಡಗಬೆಟ್ಟುವಿನ ಅಪಾರ್ಟ್‌ಮೆಂಟ್‌ವೊಂದರ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಅಬ್ದುಲ್‌ ರಜಾಕ್‌ ಹಾಗೂ ಮುದುಕಪ್ಪ ಎಂಬ ಇಬ್ಬರು ವ್ಯಕ್ತಿಗಳು ಮದ್ಯ ಮಾರಾಟ ಮಾಡುತ್ತಿದ್ದರು.

ಕಾರ್ಯಾಚರಣೆಗಿಳಿದ ಮಣಿಪಾಲ ಪೊಲೀಸರು ಅಬ್ದುಲ್‌ ರಜಾಕ್‌ನ ಬಳಿ ಇದ್ದ ಮದ್ಯ ತುಂಬಿದ 60 ಟೆಟ್ರಾ ಪ್ಯಾಕೆಟ್‌ ಹಾಗೂ ಮುದುಕಪ್ಪನ ಬಳಿ ಇದ್ದ 15 ಟೆಟ್ರಾ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ