ಉಡುಪಿ – ಜಾನುವಾರು ಅಕ್ರಮ ಸಾಗಾಟ ಪತ್ತೆ

ಉಡುಪಿ : 41ನೇ ಶಿರೂರು ಗ್ರಾಮದ ಹರಿಖಂಡಿಗೆಯ ಚೆಕ್‌ಪೋಸ್ಟ್‌ನಲ್ಲಿ ಜನ್ಸಾಲೆಯಿಂದ ಹರಿಖಂಡಿಗೆ ಜಂಕ್ಷನ್ ಕಡೆಗೆ ಬಂದ ಮಿನಿ ಗೂಡ್ಸ್‌ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಗುರುವಾರ ಪತ್ತೆಯಾಗಿದೆ.

ಪೊಲೀಸರು ವಾಹನವನ್ನು ನಿಲ್ಲಿಸಲು ಸೂಚಿಸಿದರೂ ವಾಹನ ಚಾಲಕ ವಾಹನವನ್ನು ನಿಲ್ಲಿಸದೆ ಹಿರಿಯಡ್ಕ ಕಡೆಗೆ ಚಲಾಯಿಸಿಕೊಂಡು ಹೋಗಿದ್ದ ಪೊಲೀಸರು ಬೈಕ್‌ನಲ್ಲಿ ಹಿಂಬಾಲಿಸಿ ವಾಹನವನ್ನು ಪರಿಶೀಲಿಸಿದಾಗ ಮುಚ್ಚಿದ್ದ ಟರ್ಪಾಲ್ ಹಿಂದೆ ಎರಡು ಕೋಣ. ಒಂದು ದನ, ಒಂದು ಹೆಣ್ಣು ಕರು ಹಾಗೂ ಒಂದು ಗಂಡು ಕರುವನ್ನು ಹಿಂಸಾತ್ಮಕವಾಗಿ ಕಟ್ಟಿ ಹಾಕಲಾಗಿತ್ತು.

ವಾಹನ ಚಾಲಕ ಅಮೀರ್ ಸುಹೇಲ್ ಜತೆಯಲ್ಲಿದ್ದ ಅಮ್ಮದ್ ಯಾವುದೇ ಪರವಾನಗಿ ಹೊಂದಿರಲಿಲ್ಲ. ಹರಿಖಂಡಿಗೆಯ ಶ್ರೀಧರ್ ಅವರಿಂದ ಕೋಣ, ಹಸುಗಳನ್ನು ಖರೀದಿಸಿ ವಧೆ ಮಾಡಿ ಮಾಂಸ ಮಾರಾಟಕ್ಕಾಗಿ ಸಾಗಿಸುತ್ತಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ. ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ನಾಲ್ಕು ತಿಂಗಳ ಹೆಣ್ಣು ಮಗುವನ್ನು ರಸ್ತೆ‌ ಬದಿ ಬಿಟ್ಟು ಹೋದ ಕಟುಕರು

SII 2025 ಗ್ರೀನ್ ಶ್ರೇಯಾಂಕಗಳ ಪ್ಲಾಟಿನಂ+ ಬ್ಯಾಂಡ್‌ನಲ್ಲಿ ಮಾಹೆಗೆ ಅಗ್ರ ಸ್ಥಾನ

ಋಷಿಯಾಗದವ, ಖುಷಿ ಇಲ್ಲದವ ಕವಿಯಾಗಲಾರ – ಹೆಚ್ ಡುಂಡಿರಾಜ್​