ಮಂಗಳೂರು : ಭಜರಂಗದಳ ಕಾರ್ಯಕರ್ತರು ಅಕ್ರಮ ಗೋಮಾಂಸ ಸಾಗಾಟವನ್ನು ನಗರದ ಪಡೀಲ್ ಬಳಿ ಪತ್ತೆ ಹಚ್ಚಿದ್ದಾರೆ.
ಮಾರ್ಚ್ 19ರ ಬುಧವಾರ ಆರೋಪಿಗಳು ಆಟೋರಿಕ್ಷಾದಲ್ಲಿ ಅಕ್ರಮವಾಗಿ ಗೋಮಾಂಸವನ್ನು ಸಾಗಿಸುತ್ತಿದ್ದರು. ಭಜರಂಗದಳ ಕಾರ್ಯಕರ್ತರು ಆಟೋರಿಕ್ಷಾವನ್ನು ತಡೆದು ಪರಿಶೀಲನೆ ನಡೆಸಿದಾಗ ಸುಮಾರು 300 ಕೆಜಿಗೂ ಅಧಿಕ ಗೋಮಾಂಸ ಪತ್ತೆಯಾಗಿದೆ.
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.