ಗೃಹಿಣಿ ನಾಪತ್ತೆ; ದೂರು ದಾಖಲು

ಪಡುಬಿದ್ರಿ : ಪೂನಾ ಮೂಲದವರಾಗಿದ್ದು, ಉಚ್ಚಿಲ ಬಡಾ ಗ್ರಾಮದ ಅಬ್ದುಲ್‌ ಅಜೀಜ್‌ ಅವರನ್ನು ವಿವಾಹವಾಗಿದ್ದ ಅಯಿಷಾ (33) ಅವರು ನ. 26ರಿಂದ ಮನೆ ಬಿಟ್ಟು ಹೋದವರು ಮರಳಿ ಮನಗೆ ಬಾರದೆ ನಾಪತ್ತೆಯಾಗಿರುವುದಾಗಿ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನ್ನ ಮಗ ಹಾಗೂ ಗಂಡನೊಂದಿಗೆ ಗಲ್ಫ್ ರಾಷ್ಟ್ರದಲ್ಲಿದ್ದು, ಕಳೆದ 6 ತಿಂಗಳಿನಿಂದ ಅವರು ಬಡಾ ಗ್ರಾಮದಲ್ಲಿದ್ದರು. ತಾಯಿಯನ್ನು ಕರೆದುಕೊಂಡು ಅಬ್ದುಲ್‌ ಅಜೀಜ್‌ ಅವರು ನ. 26ರಂದು ಮಣಿಪಾಲದ ಆಸ್ಪತ್ರೆಗೆ ಹೋಗಿ ಮರಳಿ ಬರುವ ವೇಳೆ ಅಯಿಷಾ ಮನೆಯಲ್ಲಿ ಇರಲಿಲ್ಲ.

ಅಯಿಷಾ ಬಿಳಿ ಮೈಬಣ್ಣ ಹೊಂದಿದ್ದು, ಮುಖದಲ್ಲೊಂದು ಮಚ್ಚೆಯಿದೆ. ಕನ್ನಡಕವನ್ನು ಧರಿಸುತ್ತಾರೆ. 5.2 ಅಡಿ ಎತ್ತರವಿದ್ದು, ಬುರ್ಖಾ ಧರಿಸಿದ್ದ ಅವರು ಮರಾಠಿ, ಹಿಂದಿ, ಇಂಗ್ಲಿಷ್‌ ಹಾಗೂ ಬ್ಯಾರಿ ಭಾಷೆಯನ್ನು ಮಾತಾಡುತ್ತಾರೆ. ಅವರ ಬಗ್ಗೆ ಯಾರಿಗಾದರೂ ಸುಳಿವು ಲಭಿಸಿದ್ದಲ್ಲಿ ಪಡುಬಿದ್ರಿ ಪೊಲೀಸ್‌ ಠಾಣೆ(0820 2555452)ಯನ್ನು ಸಂಪರ್ಕಿಸಲು ಪೊಲೀಸರು ತಿಳಿಸಿದ್ದಾರೆ.

Related posts

ಉಡುಪಿಯ ಸಾಧಕ ಪತ್ರಕರ್ತರಿಗೆ ಅಭಿನಂದನಾ ಕಾರ್ಯಕ್ರಮ

‘ಕನಸಿನ ಕನ್ಯೆ’ ಮಾಲಾಶ್ರೀ ಕೃಷ್ಣಮಠಕ್ಕೆ ಭೇಟಿ – ದೇವರ ದರ್ಶನ

ಗೋವಾ ಮೀನುಗಾರಿಕೆ ಸಚಿವರಾದ ಶ್ರೀ ನೀಲಕಂಠ ಹಲರ್ನ್ಕರ್‌ರವರನ್ನು ಭೇಟಿ ಮಾಡಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ನೇತೃತ್ವದ ಮಲ್ಪೆ ಮೀನುಗಾರ ಸಂಘದ ನಿಯೋಗ